Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ಆಕರ್ಷಣೆಗಳು » ಗೋಗ್ರಿಪುರ್

ಗೋಗ್ರಿಪುರ್, ಕರ್ನಾಲ್

1

ಗೋಗ್ರಿಪುರ್ ಎಂಬುದು ಕರ್ನಾಲ್ ಜಿಲ್ಲೆಯಲ್ಲಿನ ನಿಸ್ಸಿಂಗ್ ಬ್ಲಾಕಿನಲ್ಲಿರುವ ಒಂದು ಹಳ್ಳಿಯಾಗಿದೆ. ಇದು ಕರ್ನಾಲ್ ನಗರದಿಂದ 7 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಬಜಿಡಾ ಜಟನ್ ರೈಲು ನಿಲ್ದಾಣದಿಂದ ಸಹ ಇಲ್ಲಿಗೆ ತಲುಪಬಹುದು. ಬು-ಅಲಿ- ಕಲಂಧರ್ ಎಂಬ ಮುಸಾಲ್ಮಾನ್ ಸಂತ ಅಥವಾ ಪೀರ್ ರವರಿಗೆ ಸೇರಿದ ಒಂದು ಗುಡಿಯು ಇಲ್ಲಿ ಭಾರೀ ಪ್ರಸಿದ್ಧಿಯನ್ನು ಪಡೆದಿದೆ.

"ಕಲಂಧರ್" ಎಂದರೆ ಯಾವುದೇ ಸ್ಥಿರ ಮತ್ತು ಚರ ಆಸ್ತಿ ಹೊಂದದವನು ಮತ್ತು ಅಂತಹ ಬಯಕೆಯನ್ನು ಸಹ ಹೊಂದಿಲ್ಲದವನು ಎಂದರ್ಥ. ಇವರು ನಿಜವಾಗಿಯೂ ಭಿಕ್ಷುಕರಲ್ಲ, ಆದರೆ ನೀಡಿದನ್ನು ಸಂತೃಪ್ತಿಯಿಂದ ಸ್ವೀಕರಿಸುವವರು ಮಾತ್ರ. ಇವರನ್ನು ಉರ್ದುವಿನಲ್ಲಿ " ದರ್ವೇಶ್" ಎಂದು ಸಹ ಕರೆಯುತ್ತಾರೆ.

ಕಲಂಧರರು ದೇವರಿಗೆ ಅತ್ಯಂತ ಪ್ರೀತಿ ಪಾತ್ರರು. ಜನರು ತಮ್ಮ ಇಚ್ಛೆಗೆ ಅನುಸಾರವಾಗಿ ಯಾವ ಆಹಾರವನ್ನು ನೀಡುತ್ತಾರೊ, ಅದರಲ್ಲಿಯೇ ತೃಪ್ತಿಯಿಂದ ಜೀವನ ಸಾಗಿಸುವುದು ಇವರ ಜೀವನ ಶೈಲಿ. ಇವರು ಸದಾ ದೇವರ ಧ್ಯಾನದಲ್ಲಿ ಮಗ್ನರಾಗಿ, ಐಹಿಕ ಸುಖ ಭೋಗಗಳನ್ನು ಮರೆತು ಬಿಟ್ಟಿರುತ್ತಾರೆ.

ದೇವರಿಗೆ ಪ್ರೀತಿ ಪಾತ್ರರಾದ ಇವರು ಯಾವುದೇ ಸಂಪಾದನೆಯಿಲ್ಲದಿದ್ದರು, ಭಿಕ್ಷೆ ಬೇಡದಿದ್ದರು, ಬೆಳೆ ಬೆಳೆಯದಿದ್ದರು ಸಹ ಉಪಾವಾಸದಿಂದ ಸಾಯುವುದಿಲ್ಲ. ಬಹುಶಃ ಇವರನ್ನು ನೋಡಿಯೇ ಇರಬೇಕು " ಹುಟ್ಟಿಸಿದ ದೇವರು ಹುಲ್ಲನ್ನು ಮೇಯಿಸುವುದಿಲ್ಲ" ಎಂಬ ಗಾದೆ ಹುಟ್ಟಿರಬೇಕು. ಅದಕ್ಕಾಗಿಯೇ ಕಲಂಧರರವರನ್ನು ಬಾದ್‍ಷಾ ಎಂದು ಕರೆಯುತ್ತಾರೆ. ಇವರನ್ನು ಜನರು ರಾಜನಿಗೆ ಹೋಲಿಸುತ್ತಾರೆ, ಅದಲ್ಲದೆ ಇವರು ತಮ್ಮ ಶಕ್ತಿಯಿಂದ ತಮ್ಮ ಅಕ್ಕ ಪಕ್ಕದ ಇತರ ಜನರಿಗೆ ಕೇಳಿದ್ದನ್ನು ಪ್ರಸಾದಿಸುವ ಅಭೂತಪೂರ್ವ ಶಕ್ತಿಯನ್ನು ಹೊಂದಿರುತ್ತಾರೆ ಎಂದು ನಂಬಲಾಗುತ್ತದೆ.

ಕಲಂಧರರವರು ತಮ್ಮ ದೈವಶಕ್ತಿಯಿಂದ ಕಾಯಿಲೆಗಳನ್ನು ಗುಣಪಡಿಸುವ, ದಿವಾಳಿಗಳನ್ನು ಶ್ರೀಮಂತರನ್ನಾಗಿಸುವ ಶಕ್ತಿಯನ್ನು ಸಂಪಾದಿಸಿರುತ್ತಾರೆ ಎಂದು ನಂಬಲಾಗುತ್ತದೆ. ಇವರು ಊಹೆಗು ನಿಲುಕದ ಪವಾಡಗಳನ್ನು ಮಾಡಿ ತೋರಿಸುತ್ತಾರೆ. ಆದರೆ ಅಪ್ಪಿ ತಪ್ಪಿ ಸಹ ಇವರು ತಮ್ಮ ಶಕ್ತಿಯನ್ನು ತಮ್ಮ ಒಳಿತಿಗಾಗಿ ಬಳಸುವುದಿಲ್ಲ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed