Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ಆಕರ್ಷಣೆಗಳು » ದರ್ಗಾ ನೂರಿ

ದರ್ಗಾ ನೂರಿ, ಕರ್ನಾಲ್

1

"ದರ್ಗಾ" ಎಂಬ ಪದವು ಪರ್ಷಿಯನ್ ಮೂಲದ್ದಾಗಿದೆ. ಮುಸ್ಲಿಂ ಸೂಫಿ ಸಂತ, ಸಾಧುಗಳ ಅಥವಾ " ದರ್ವೆಶ್" ಮೇಂಡಿಕಂಟ್ ಅಥವಾ " ಮುರ್ಶಿದ್" ( ಆಧ್ಯಾತ್ಮಿಕ ಗುರು) ಎಂದು ಸಹ ಕರೆಯಲ್ಪಡುತ್ತಿದ್ದವರ ಸಮಾಧಿಯ ಮೇಲೆ ನಿರ್ಮಿಸಲಾದ ಗುಡಿ ಅಥವಾ ಗೋರಿಯನ್ನು ದರ್ಗಾ ಎಂದು ಕರೆಯುತ್ತಾರೆ. ಮುಸಲ್ಮಾನರು ಇಲ್ಲಿಗೆ ತಮ್ಮ ಯಾತ್ರೆಯ ( ಝಿಯಾರತ್) ಅಂಗವಾಗಿ ಭೇಟಿ ನೀಡುತ್ತಾರೆ. ಇಲ್ಲಿಗೆ ಭೇಟಿ ನೀಡುವುದರಿಂದ ಧಾರ್ಮಿಕವಾಗಿ ಉನ್ನತ ಪದವಿ ಮತ್ತು ಮನಃಶ್ಶಾಂತಿ ದೊರೆಯುತ್ತದೆ ಎಂದು ನಂಬಲಾಗುತ್ತದೆ. ಇದರ ಜೊತೆಗೆ ವಿಶೇಷ ದಿನಗಳಲ್ಲಿ ಸಹ ಇಲ್ಲಿಗೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಆಗಮಿಸುತ್ತಾರೆ.

ದರ್ಗಾವು ಸಾಮಾನ್ಯವಾಗಿ ಪ್ರಾರ್ಥನೆ ಸಲ್ಲಿಸುವ ಮಸೀದಿ ಮತ್ತು ಮದರಸ ಎಂಬ ಧಾರ್ಮಿಕ ಶಾಲೆಯನ್ನು ಹೊಂದಿರುತ್ತದೆ. ಇದರ ಜೊತೆಗೆ ಇಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು, ಸೇವಕರು, ಮೌಲ್ವಿಗಳಿಗೆ ವಸತಿ ಹಾಗು ಸೂಫಿ ಸಂತರ ಸಮಾವೇಶ ಕೊಠಡಿಗಳನ್ನು, ಮುಂತಾದ ಸಮುದಾಯಿಕ ಅವಶ್ಯಕತೆಗಳನ್ನು ಪೂರೈಸುವ ಕಟ್ಟಡಗಳನ್ನು ಹೊಂದಿರುತ್ತದೆ.

ಸೂಫಿ ಸಂತರ ನಿಧನದ ನಂತರ ಅವರ ಶಕ್ತಿ, ಮಾರ್ಗದರ್ಶನ ಮತ್ತು ಹಾರೈಕೆಗಳನ್ನು ಉಳಿಸಿಕೊಳ್ಳುವ, ಪಡೆಯುವ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಸದಾ ಸಿಗುವಂತೆ ಮಾಡುವುದೆ ದರ್ಗಾಗಳನ್ನು ನಿರ್ಮಿಸಲು ಇರುವ ಮತ್ತೊಂದು ಕಾರಣವಾಗಿದೆ. ದರ್ಗಾಗಳಲ್ಲಿ ಆಗಾಗ ಖವಾಲಿಗಳು ಮತ್ತು ಕಿಫಿಗಳು ಎಂಬ ಅಲ್ಲಾ ಮತ್ತು ಸಂತರನ್ನು ಹೊಗಳುವ ಸಂಗೀತ ಗೋಷ್ಟಿಗಳನ್ನು ನಡೆಸಲಾಗುತ್ತದೆ. ನುಸ್ರತ್ ಫತೇಹ್ ಅಲಿ ಖಾನ್ ಮತ್ತು ಪಾಕಿಸ್ತಾನದ ಅಬಿಡ ಪರ್ವೀನ್‍ರವರು ಈ ಪ್ರಕಾರದಲ್ಲಿ ಪ್ರಸಿದ್ಧ ಗಾಯಕರಾಗಿದ್ದಾರೆ.

ಅಂತಹ ಒಂದು ದರ್ಗಾವು ಕರ್ನಾಲ್- ಕುಂಜ್‍ಪುರ ರಸ್ತೆಯಲ್ಲಿರುವ ನೆವಾಲ್‍ನಲ್ಲಿ ನೆಲೆಗೊಂಡಿದೆ. ಇದನ್ನು ದೆಹಲಿಯ ಹಜರತ್ ಸೂಫಿ ಶಾ ಅಲಮ ನೂರ್ ಮಹಮ್ಮದ್‍ರವರ ಸ್ಮರಣಾರ್ಥ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed