Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ಕವಿ ಅರಸರ್ ಕಣ್ಣದಾಸನ್ ಮಣಿಮಂಡಬಮ್

ಕವಿ ಅರಸರ್ ಕಣ್ಣದಾಸನ್ ಮಣಿಮಂಡಬಮ್, ಕಾರೈಕುಡಿ

1

ಕವಿ ಅರಸರ್ ಕಣ್ಣದಾಸನ್ ಮಣಿಮಂಡಬಮ್ ಎಂಬುದು ಪ್ರಸಿದ್ಧ ತಮಿಳು ಕವಿಯಾದ ಕವಿ ಅರಸರ್ ಕಣ್ಣದಾಸನ್‌ರವರ ನೆನಪಿನಾರ್ಥವಾಗಿ ನಿರ್ಮಿಸಲಾಗಿರುವ ಒಂದು ಸಣ್ಣ ಸ್ಮಾರಕವಾಗಿದೆ. ಇವರು ಕರೈಕುಡಿಯ ಸಮೀಪದಲ್ಲಿರುವ ಒಂದು ಸಣ್ಣ ಕುಗ್ರಾಮವಾದ ಸಿರುಕೂಲ್ಡಲ್‍ಪಟ್ಟಿಯಲ್ಲಿ ಜನಿಸಿದ್ದರು. ಇವರು ತಮ್ಮ ಕ್ರಾಂತಿಕಾರಿ ಕವಿತೆಗಳಿಂದ ತಮಿಳು ಸಾಹಿತ್ಯದ ಗತಿಯನ್ನೆ ಬದಲಿಸಿದರೆಂದು ಹೇಳಲಾಗುತ್ತದೆ. ಇವರು ವಾಕ್ಚಾತುರ್ಯವು ಸಹ ಅದ್ಭುತವಾಗಿತ್ತಂತೆ. ಇವರೇನಾದರು ವೇದಿಕೆ ಏರಿದರೆ ಇವರು ತಮ್ಮ ವಾಕ್ಚಾತುರ್ಯದಿಂದ ಸಭಿಕರನ್ನು ಮೋಡಿ ಮಾಡುತ್ತಿದ್ದರಂತೆ.

ಇವರು ಕೇವಲ ತಮಿಳು ಸಾಹಿತ್ಯಕ್ಕೆ ಮಾತ್ರವಷ್ಟೇ ಅಲ್ಲ, ತಮಿಳು ಚಿತ್ರಗಳಿಗೂ ಸಹ ಸಾಹಿತ್ಯವನ್ನು ಒದಗಿಸಿದ್ದಾರೆ. ಇವರು ರಚಿಸಿದ ಹಾಡುಗಳು ಇಂದಿಗು ಜನಪ್ರಿಯ. ಇವರ ಅನೇಕ ಅಂಕಣ ಬರಹಗಳು ತಮಿಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಸ್ವತಃ ಕಣ್ಣದಾಸನ್‍ರವರು ರಾಜಕೀಯ ವಿಡಂಬನೆಯ ಕವನಗಳನ್ನು ಬರೆದು ನಿಯತಕಾಲಿಕೆಗಳಲ್ಲಿ ಪ್ರಕಟಿಸುತ್ತಿದ್ದರು. ಇವರ ಸಾಹಿತ್ಯಕ್ಕೆ ತಮಿಳು ನಾಡಿನಲ್ಲಿ ಒಂದು ಸ್ಥಾನಮಾನ ಪ್ರಾಪ್ತಿಯಾಗಿದೆ. ಏಕೆಂದರೆ ಇವರು ತಮಿಳರಿಗೆ ಅಗತ್ಯವಿದ್ದ ದನಿಯನ್ನು ತಮ್ಮ ಸಾಹಿತ್ಯದ ಮೂಲಕ ಒದಗಿಸಿದರು. ಇವರು ಸಾಮಾನ್ಯ ಜನರ ಸಮಸ್ಯೆಗಳನ್ನು, ದುಃಖ, ದುಮ್ಮಾನಗಳಿಗೆ ಮಿಡಿದವರು.

ತಮ್ಮ ಸಮುದಾಯವನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಕ್ಕಾಗಿ ನಗರ್ತರು ಇವರ ನೆನಪಿಗಾಗಿ ಒಂದು ಮಂಟಪವನ್ನು ನಿರ್ಮಾಣ ಮಾಡಿದ್ದಾರೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu