Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ಮಹರ್ನೊನ್ಬು ಪೊಟ್ಟಲ್‍ನ ಗಾಂಧಿ ಚೌಕ

ಮಹರ್ನೊನ್ಬು ಪೊಟ್ಟಲ್‍ನ ಗಾಂಧಿ ಚೌಕ, ಕಾರೈಕುಡಿ

2

ಕರೈಕುಡಿಯಲ್ಲಿರುವ ಮಹರ್ನೊನ್ಬು ಪೊಟ್ಟಲ್‍ನ ಗಾಂಧಿ ಚೌಕವು ತನ್ನ ಐತಿಹಾಸಿಕ ಮಹತ್ವದಿಂದಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಚೌಕದಲ್ಲಿ ನಿಂತು ಹಲವಾರು ಮಹಾ ಮಹೀಮರು ಭಾಷಣ ಮಾಡಿದ್ದಾರೆ.

1906 ರಲ್ಲಿ ಪ್ರಪ್ರಥಮ ಬಾರಿಗೆ ತಮಿಳು ಸಾಹಿತ್ಯದ ಪ್ರಸಿದ್ಧ ಕವಿ, ಲೇಖಕ ಮತ್ತು ಹೋರಾಟಗಾರರಾದ ಸುಬ್ರಮಣ್ಯ ಭಾರತಿಯವರು ಕರೈಕುಡಿಗೆ ಭೇಟಿಕೊಟ್ಟಿದ್ದರು. ಆಗ ಅವರು ಇಲ್ಲಿ ಅದ್ಭುತವಾದ ಕೆಲಸಗಳನ್ನು ಮಾಡಿದ್ದ ಚೆಟ್ಟಿಯಾರ್ ಯುವಕರನ್ನು ಅಭಿನಂದಿಸುವ ಸಲುವಾಗಿ ಮಹರ್ನೊನ್ಬು ಪೊಟ್ಟಲ್‍ನ ಗಾಂಧಿ ಚೌಕದಲ್ಲಿ ಒಂದು ಹಾಡು ಹಾಡಿದ್ದರು. ಆ ಸಂದರ್ಭದ ಒಂದು ಛಾಯಾಚಿತ್ರವನ್ನು ಸಹ ತೆಗೆಯಲಾಗಿದ್ದು, ಭಾರತದ ಇತಿಹಾಸದ ಒಂದು ಅಪೂರ್ವ ಸಂಗ್ರಹವಾಗಿ ಮತ್ತು ಬೆಲೆಕಟ್ಟಲಾಗದ ಒಂದು ನೆನಪಿನ ಕುರುಹಾಗಿ ಅದು ಇಂದಿಗು ಇದೆ.

ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಕರೈಕುಡಿಗೆ 1927ರಲ್ಲಿ ಆಗಮಿಸಿದ್ದರು. ಆಗ ಅವರು ಒಂದಲ್ಲ, ಎರಡು ಭಾಷಣಗಳನ್ನು ಈ ಚೌಕದಲ್ಲಿ ಮಾಡಿದ್ದರು. ಆಗಿನಿಂದ ಈ ಚೌಕಕ್ಕೆ ಅವರ ಹೆಸರು ಬಂದಿತು.

ಪಂಡಿತ್ ಜವಾಹರ್ ಲಾಲ್ ನೆಹರುರವರು ಸಿ ಇ ಸಿ ಆರ್ ಐ ಕೇಂದ್ರವನ್ನು ಉದ್ಘಾಟಿಸುವ ಸಲುವಾಗಿ ಕಾರೈಕಾಲ್ ನಗರಕ್ಕೆ 1948 ರಲ್ಲಿ ಭೇಟಿಕೊಟ್ಟಿದ್ದರು. ಅವರು ಸಹ ಈ ಚೌಕದಲ್ಲಿ ನಿಂತು ಭಾಷಣ ಮಾಡಿದ್ದರು.

One Way
Return
From (Departure City)
To (Destination City)
Depart On
16 Sep,Wed
Return On
17 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Sep,Wed
Check Out
17 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Sep,Wed
Return On
17 Sep,Thu