ಮ್ಯಾಕ್ ಲಿಯೋಡ್ ಗಂಜ್ ಇದೊಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಕಾಂಗ್ರಾದಿಂದ 19 ಕೀ.ಮಿ ದೂರದಲ್ಲಿದೆ. ಇದು ದಲೈ ಲಾಮಾ ಕ್ಷೇತ್ರವಾಗಿದ್ದು, ಸಮುದ್ರ ಮಟ್ಟದಿಂದ 1770 ಮೀಟರ್ ಎತ್ತರದಲ್ಲಿದೆ. ಇದು ಯುದ್ಧದ ಸಮಯದಲ್ಲಿ ಮೂರು ದಶಕಗಳಿಂದ ಟಿಬೆಟ್ ಸರ್ಕಾರದ ಕೇಂದ್ರವಾಗಿತ್ತು.
ಈ ಸ್ಥಳವು ಭಗವಾನ್ ಬುದ್ಧ, ಪದ್ಮಸಂಭವ ಮತ್ತು ಅವಲೋಕ್ತೇಶ್ವರ ಇವರ ದೊಡ್ಡ ಚಿತ್ರವನ್ನು ಮಠದಲ್ಲಿ ಹೊಂದಿದೆ. ಮ್ಯಾಕ್ ಲಿಯಾಡೋ ಗಂಜ್ ನಲ್ಲಿ ಇವುಗಳಲ್ಲದೇ ಉಳಿದ ಟಿಬೆಟಿಯನ್ ಆಕರ್ಷಣೆಗಳಾದ ನಮ್ಗಾಯಲ್ ಮಠ, ಗೊಂಪಾ ಡೀಪ್ ಸಿ-ಚೋಕ್ ಲಿಂಗ್ (ಒಂದು ಸಣ್ಣ ಮಠ) ಮತ್ತು ಪ್ರದರ್ಶನ ಕಲಾ ಟಿಬೆಟಿಯನ್ ಸಂಸ್ಥೆ (Tibetan Institute of Performing Arts) ಕೂಡಾ ಇಲ್ಲಿವೆ. ಇವುಗಳ ಹೊರತಾಗಿ, ಇಲ್ಲಿರುವ ಟಿಬೆಟಿಯನ್ ಕಾರ್ಯಗಳ ಟಿಬೆಟಿಯನ್ ಗ್ರಂಥಾಲಯ, ಮಣಿ ಲಖಾಂಗ್ ಸ್ತೂಪ, ನಿಚುಂಗ್ ಮಠ, ನುರ್ಬುಲಿಂಖಾ ಸಂಸ್ಥೆ, ಭಗ್ಸೂ ಜಲಪಾತ, ಭಗ್ಸೂನಾಥ ದೇವಾಲಯ ಮತ್ತು ಆಂಗ್ಚಿಕೇನ್ ಚರ್ಚ್ ಮೊದಲಾದವು ಇಲ್ಲಿಗೆ ಬರುವ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತವೆ.
ಮ್ಯಾಕ್ ಲಿಯೋಡ್ ಗಂಜ್ ಒಂದು ಪ್ರಮುಖ ಟಿಬೆಟಿಯನ್ ಕಲಾಕೃತಿಗಳು ಮತ್ತು ಉಡುಪುಗಳ ಕೇಂದ್ರವಾಗಿದೆ. ಏಪ್ರೀಲ್ ತಿಂಗಳಿನಲ್ಲಿ ಹತ್ತು ದಿನಗಳ ಕಾಲ ಟಿಬೆಟಿಯನ್ ರಂಗಭೂಮಿ/ ಚಿತ್ರಮಂದಿರದಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದು ದಟ್ಟವಾದ ಓಕ್, ಪೈನ್, ದೇವದಾರು ರೋಡೋಡೆನ್ಡ್ರೋನ್ ಮೊದಲಾದ ಕಾಡುಗಳಿಂದ ಸುತ್ತುವರಿದಿದೆ. ಅಲ್ಲದೇ ಮ್ಯಾಕ್ ಲಿಯೋಡ್ ಗಂಜ್ ಹಿಮ ಟೋಪ್ಪಿಗೆಯಂತಿರುವ ಬೆಟ್ಟಗಳಿಂದ ಸುತ್ತುವರಿದಿದ್ದು ಪ್ರಶಾಂತವಾದ ವಾತಾವರಣವನ್ನು ಹೊಂದಿದೆ. ಆದ್ದರಿಂದ ವರ್ಷವಿಡಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಮನಸ್ಸಿಗೆ ಆಹ್ಲಾದಕರವಾದಂತಹ ವಾತಾವರಣ ಸಿಗುತ್ತದೆ.