ಮಗೊಲು ಖಾಟ್ ಜೋರ್ಹತದ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರವಾಸಿ ತಾಣ. ರಾಜ ರಾಜೇಶ್ವರ ಸಿನ್ಹಾ ಮಣಿಪುರಿ ರಾಣಿಯನ್ನು ಮದುವೆಯಾದ ಬಳಿಕ ಮಗೊಲು ಅಥವಾ ಮಣಿಪುರಿಯನ್ನು ನಿರ್ಮಿಸಿದ.ಮನೈಮಜಿ ಗ್ರಾಮದ ಮಣಿಪುರಿ ರಾಣಿ ಕುರಂಗನಯಾನಿಯನ್ನು ರಾಜ ಮದುವೆಯಾಗಿದ್ದ. ಜೋರ್ಹತ್ ನಗರದ ಮಧ್ಯಭಾಗದಿಂದ 6 ಕಿ.ಮೀ. ದೂರದಲ್ಲಿ ಮಗೊಲು ಖಾಟ್ ಇದ್ದು, ತನ್ನ ಪತ್ನಿಗೆ ರಾಜ ಏನು ಮಾಡಬಹುದು ಎನ್ನುವ ಸಂಕೇತದಂತೆ ಈ ತಾಣವಿದೆ. ಈ ಪ್ರದೇಶವಿಂದು ಭಗ್ನಾವಶೇವಾಗಿದ್ದರೂ ಅದರ ಭವ್ಯತೆ ಮತ್ತು ನೆನಪುಗಳು ಹಾಗೆ ಉಳಿದುಕೊಂದಿದೆ. ತಾಣವು ಸರ್ವೋತ್ಕೃಷ್ಟ ರೀತಿಯಲ್ಲಿ ಭವ್ಯವಾಗಿಲ್ಲದಿದ್ದರೂ ತನ್ನದೇ ಆದ ಶೈಲಿಯಲ್ಲಿ ಸುಂದರವಾಗಿದೆ.
ಮಗೊಲು ಖಾಟ್ ಜೊರ್ಹತ್ ನಗರದಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಕಾರಣ ಪ್ರವಾಸಿಗರು ಸುಲಭವಾಗಿ ಭೇಟಿ ನೀಡಬಹುದು. ಪ್ರವಾಸಿಗರು ಬಾಡಿಗೆ ಕಾರು, ರಾಜ್ಯ ಸಾರಿಗೆ ವಾಹನಗಳು ಅಥವಾ ಅಟೋ ರಿಕ್ಷಾ ಮೂಲಕವೂ ಪ್ರಯಾಣಿಸಬಹುದು. ಮಗೊಲು ಖಾಟ್ ಗೆ ಭೇಟಿ ನೀಡಿದರೆ ನಿಮ್ಮ ಸಂಪೂರ್ಣ ದಿನ ವ್ಯರ್ಥವಾಗಲ್ಲ ಎನ್ನುವುದೇ ಭೇಟಿಗೆ ಒಳ್ಳೆಯದು.


Click it and Unblock the Notifications