ಗುಡ ಬಿಶ್ನೋಯಿ ಹಳ್ಳಿಯು ಜೋಧ್ಪುರದಿಂದ 25 ಕಿ.ಮೀ ದೂರದಲ್ಲಿರುವ ಬುಡಕಟ್ಟು ಜನಾಂಗ ವಾಸಿಸುವ ಹಳ್ಳಿ. ಇಲ್ಲಿನ ಖೇಜ್ರಿ ಮರಗಳು ಮತ್ತು ಗುಡ ಬಿಶ್ನೋಯಿ ಕೆರೆಯು ಈ ಹಳ್ಳಿಗೆ ಸೌಂದರ್ಯವನ್ನು ನೀಡಿದೆ. ಪ್ರವಾಸಿಗರು ಹಲವು ವಲಸೆ ಹಕ್ಕಿಗಳನ್ನು ಇಲ್ಲಿ ವೀಕ್ಷಿಸಬಹುದು. ಇದರ ಜೊತೆಗೆ ಹಿಂದೂ ದೇವರಾದ ವಿಷ್ಣು ದೇವಸ್ಥಾನವೂ ಇಲ್ಲಿದೆ.