ಖಾರ್ಕೈ ಮತ್ತು ಸುಬರ್ಣರೇಖ ನದಿಗಳ ಸಂಗಮದ ಸ್ಥಳದಲ್ಲಿ ಈ ಪಾರ್ಕನ್ನು ನೀವು ನೋಡಬಹುದಾಗಿದೆ. ಈ ಸಫಾರಿ ಪಾರ್ಕನಲ್ಲಿ ಪ್ರಾಣಿಗಳು ಆರಾಮವಾಗಿ ಅಡ್ದಾಡುವುದನ್ನು ಪ್ರವಾಸಿಗರು ನೋಡಬಹುದು. ಈ ಪಾರ್ಕ್ ವಿವಿಧ ಪ್ರಾಣಿ ಮತ್ತು ಪಕ್ಷಿ ಸಂಕುಲಗಳನ್ನು ಒಳಗೊಂಡಿದ್ದು ಇದು ಪ್ರಾಕೃತಿಕ ಶಿಕ್ಷಣದ ಕೇಂದ್ರವಾಗಿದೆ. ಜುಬಿಲಿ ಸರೋವರದ ಪ್ರಶಾಂತ ನೀರಿನ ಮೇಲೆ ಮಾಡುವ ಬೋಟಿಂಗ್ ಪ್ರವಾಸಿಗರಿಗೆ ರೋಮಾಂಚಕಾರಿಯಾದ ಅನುಭವವನ್ನು ನೀಡುತ್ತದೆ. ಇಲ್ಲಿಯ ಪ್ರವಾಸಿ ತಾಣಗಳು ಉತ್ತಮ ನೈಸರ್ಗಿಕ ವಾತಾವರಣವನ್ನು ಹೊಂದಿದ್ದು , ಪ್ರವಾಸಿಗರಿಗೆ ನವ ಚೈತನ್ಯವನ್ನು ನೀಡುತ್ತದೆ. ಈ ಪಾರ್ಕ ಸುಂದರವಾದ ಸರೋವರವನ್ನು ಹೊಂದಿದ್ದು , ಬೋಟಿಂಗ್ ಸೌಲಭ್ಯವಿದೆ. ಇದು ಜುಬಿಲಿ ಪಾರ್ಕ ಹಿಂದುಗಡೆ ಇದೆ. ಇದು ಎಲ್ಲಾ ಪ್ರಕೃತಿ ಪ್ರಿಯರಿಗೆ ಒಂದು ಉತ್ತಮವಾದ ಸ್ಥಳವಾಗಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ಇಲ್ಲಿ ಸಾವಿರಾರು ವಲಸೆ ಹಕ್ಕಿಗಳು ಇಲ್ಲಿಗೆ ಭೇಟಿ ನೀಡುತ್ತವೆ. ಆಗ ಇವುಗಳನ್ನು ನೋಡುವುದು ಪ್ರಕೃತಿ ಪ್ರಿಯರಿಗೆ ಒಂದು ಹಬ್ಬವೇ ಸೈ. ಈ ಪಾರ್ಕ ಸುಂದರವಾದ ಸರೋವರದ ಜೊತೆಗೆ ಸಣ್ಣ ಬೋಟ್ ಹೌಸ್ ಸಹ ಹೊಂದಿದೆ.


Click it and Unblock the Notifications