ರಘುನಾಥ್ ಬಜಾರ್, ಅನೇಕ ಅಂಗಡಿಮುಗ್ಗಟ್ಟುಗಳಿಂದ ತುಂಬಿದ್ದು, ಪ್ರವಾಸಿಗರು ಶಾಪಿಂಗ್ ಮಾಡಬಹುದಾದ ಸ್ಥಳ. ಸದಾ ಜನಸಂದಣಿಯಿಂದ ಕೂಡಿರುವ ಈ ಮಾರುಕಟ್ಟೆ ಸ್ಥಳವು ಒಣ ಹಣ್ಣು ಮಾರುಕಟ್ಟೆಗೆ ಜನಪ್ರಿಯವಾಗಿದೆ. ಬಾದಾಮಿ, ಒಣದ್ರಾಕ್ಷಿ ಮತ್ತು ಗೆರಟು ಒಣ ಹಣ್ಣುಗಳನ್ನು ಸಮಂಜಸವಾದ ಬೆಲೆಗೆ ಇಲ್ಲಿ ಕೊಂಡುಕೊಳ್ಳಬಹುದು. ಒಣ ಹಣ್ಣು ಅಂಗಡಿಗಳ ಹೊರತಾಗಿ, ಈ ಬಜಾರ್ ತನ್ನ ಕಾಶ್ಮೀರಿ ಕರಕುಶಲ ಮತ್ತು ಡೋಗ್ರಾ ಆಭರಣಗಳಿಗೆ ಪ್ರಸಿದ್ಧವಾಗಿದೆ. ಒಂದು ಭಾರತೀಯ ಸಿಹಿ ತಿಂಡಿ ಬರ್ಫಿ, ರಘುನಾಥ್ ಬಜಾರ್ ನಲ್ಲಿ ಹೇರಳವಾಗಿ ಸಿಗುವ ಒಂದು ಸ್ಥಳೀಯ ವಿಶೇಷತೆಯಾಗಿದೆ.