ಪೀರ್ ಬಾಬಾ ದರ್ಗಾ ವರ್ಷಪೂರ್ತಿ ಸಾವಿರಾರು ಭಕ್ತರಿಂದ ಕಿಕ್ಕಿರಿದ ಜಮ್ಮುವಿನ ಒಂದು ಜನಪ್ರಿಯ ಆಕರ್ಷಣೆಯಾಗಿದೆ. ಈ ಸ್ಥಳ 'ದರ್ಗಾ' ಅಥವಾ ಒಂದು ಪ್ರಖ್ಯಾತ ಮುಸ್ಲಿಂ ಸಂತ ಪೀರ್ ಬುದ್ದನ್ ಅಲಿ ಶಾಹ್ ಸಮಾಧಿ ಮೇಲೆ ನಿರ್ಮಿಸಲ್ಪಟ್ಟ ಒಂದು ಸೂಫಿ ದೇವಾಲಯ. ಜನಪ್ರಿಯ ಸ್ಥಳೀಯ ನಂಬಿಕೆಯ ಪ್ರಕಾರ, ಮುಸ್ಲಿಂ ಸಂತ 500 ವರ್ಷಗಳ ಮಾಗಿದ ವಯಸ್ಸಿನ ವರೆಗೆ ಬದುಕಿದ್ದನು ಎನ್ನಲಾಗುತ್ತದೆ. ಮತ್ತೊಂದು ಕಥೆ ಹೇಳುವಂತೆ, ಈ ಪವಿತ್ರ ವ್ಯಕ್ತಿ, ದೀರ್ಘ ಮತ್ತು ಆರೋಗ್ಯಕರ ಜೀವನಕ್ಕೆ ಕೇವಲ ಹಾಲನ್ನು ಮಾತ್ರ ಸೇವಿಸುತ್ತಿದ್ದ ಎನ್ನಲಾಗಿದೆ.
ಈ ಮುಸ್ಲಿಂ ಸಂತ, ಹತ್ತನೆಯ ಮತ್ತು ಕೊನೆಯ ಸಿಖ್ ಗುರು, ಗುರು ಗೋಬಿಂದ್ ಸಿಂಗ್ ರ ಆಪ್ತ ಒಡನಾಡಿಯಾಗಿದ್ದ. ಬಾಬಾ ಭಕ್ತರು ಮಾತ್ರವಲ್ಲದೆ ವಿವಿಧ ಧರ್ಮಗಳಿಗೆ ಸೇರಿದ ಜನರು, ಪ್ರಸಿದ್ಧ ಸಂತನಿಗೆ ಗೌರವ ಸಲ್ಲಿಸಲು ಪ್ರತಿ ಗುರುವಾರ ದರ್ಗಾ ಕ್ಕೆ ಭೇಟಿ ನೀಡುತ್ತಾರೆ.


Click it and Unblock the Notifications