ಮನ್ಸರ್ ಸರೋವರ, ಮಾನಸ ಸರೋವರದ ಪವಿತ್ರತೆಯ ಪರಂಪರೆಯ ಪ್ರತಿರೂಪವಾಗಿದ್ದು, ಪ್ರವಾಸಿಗರ ನಡುವೆ ಜನಪ್ರಿಯವಾಗಿರುವ ಪವಿತ್ರ ತಾಣವಾಗಿದೆ. ಈ ಸುಂದರ ಸರೋವರದ ಉದ್ದ ಒಂದು ಮೈಲಿಗಿಂತ ಹೆಚ್ಚು ಹಾಗೂ ಅಗಲ ಅರ್ಧ ಮೈಲಿಗಳಷ್ಟು. ಇದು ಸಮೃದ್ಧ ಹಸಿರು ಕಾಡುಗಳಿಂದ ಸುತ್ತುವರೆದಿದೆ. ಹಿಂದೂ ಹಾವಿನ ದೇವರು, ಶೇಷನಾಗನನ್ನು ಪೂಜಿಸುವ ದೇವಾಲಯ ಈ ನದಿಯ ದಂಡೆಯ ಮೇಲಿದೆ.
ಸ್ಥಳೀಯ ನಂಬಿಕೆಯ ಪ್ರಕಾರ, ಹೊಸದಾಗಿ ಮದುವೆಯಾದ ದಂಪತಿಗಳು ಸರೋವರದಲ್ಲಿ ಮೂರು 'ಪರಿಕ್ರಮ' ಗಳನ್ನು ಅಥವಾ ಸರೋವರವನ್ನು ಸುತ್ತಿದರೆ ಶೇಷನಾಗನ ಆಶೀರ್ವಾದವನ್ನು ಪಡೆದು ಅವರ ಅದೃಷ್ಟವು ಚೆನ್ನಾಗಿರುತ್ತದೆ ಎಂದು ನಂಬಲಾಗಿದೆ. ಸರೋವರಕ್ಕೆ ಸಂಬಂಧಿಸಿದ ಮತ್ತೊಂದು ನಂಬಿಕೆಯ ಪ್ರಕಾರ, ಸರೋವರದಲ್ಲಿ ಒಮ್ಮೆ ಮುಳುಗೆದ್ದರೆ ತಮ್ಮ ಪಾಪಗಳನ್ನು ಜನರು ಕಳೆದುಕೊಳ್ಳಬಹುದು ಎಂದೂ ಹೇಳಲಾಗುತ್ತದೆ. ಪ್ರವಾಸಿಗರು ಮನ್ಸರ್ ಸರೋವರದಲ್ಲಿ ಬೋಟಿಂಗ್ ಅನ್ನು ಕೂಡ ಕೈಗೊಳ್ಳಬಹುದು.
ಶೇಷನಾಗ ದೇವಸ್ಥಾನದ ಹೊರತಾಗಿ, ಪ್ರವಾಸಿಗರು ಇಲ್ಲಿಯೇ ಹತ್ತಿರದಲ್ಲಿರುವ ದುರ್ಗಾ ದೇವಸ್ಥಾನ, ಪಾರ್ವತಿ ಶಿವ ಅಥವಾ ಉಮಾಪತಿ ಮಹಾದೇವ ದೇವಾಲಯ ಮತ್ತು ನರಸಿಂಹ ದೇವಸ್ಥಾನವನ್ನೂ ನೋಡಬಹುದು. ಒಂದು ವನ್ಯಜೀವಿಗಳ ಅಭಯಾರಣ್ಯವೂ ಸಹ ಈ ಸರೋವರದ ಹತ್ತಿರದಲ್ಲಿದೆ.


Click it and Unblock the Notifications