ಹರಿ ಮಾರುಕಟ್ಟೆ, ಜಮ್ಮು ಪ್ರದೇಶದಲ್ಲಿನ ಒಂದು ಜನಪ್ರಿಯ ಶಾಪಿಂಗ್ ಪ್ರದೇಶ. ಈ ಸ್ಥಳಕ್ಕೆ ಜಮ್ಮುವಿನ ಹಿಂದಿನ ರಾಜ ಹರಿ ಸಿಂಗ್ ನ ಹೆಸರಿಡಲಾಗಿದೆ. ಹರಿ ಸಿಂಗ್, ಜಮ್ಮು ಮತ್ತು ಕಾಶ್ಮೀರ ಕೊನೆಯ ರಾಜನಾಗಿದ್ದು, ಭಾರತದೊಂದಿಗೆ ಜಮ್ಮುವನ್ನು ಸೇರಿಸಲು ಮಹತ್ತರವಾದ ಪಾತ್ರವನ್ನುವಹಿಸಿದ್ದ ವ್ಯಕ್ತಿ.
ಪ್ರವಾಸಿಗರಿಗಾಗಿ ಒಣ ಹಣ್ಣುಗಳು, ಕಾಶ್ಮೀರಿ ಕರಕುಶಲ ವಸ್ತುಗಳು ಮತ್ತು ಡೋಗ್ರಾ ಆಭರಣಗಳು ಹರಿ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಒಣ ಹಣ್ಣುಗಳು ಹರಿ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯವಾಗಿವೆ. ಒಣ ಹಣ್ಣುಗಳ ಹೊರತಾಗಿ ಒಣಗಿಸಿದ ಮಾವಿನ ಸಿಪ್ಪೆ, ಬಾಸಮತಿ ಅಕ್ಕಿ ಮತ್ತು ರಾಜ್ಮಾ ಅಥವಾ ಕಿಡ್ನಿ ಬೀನ್ಸ್ ಗಳನ್ನು ವ್ಯಾಪಕವಾಗಿ ಈ ಜನಪ್ರಿಯ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಈ ಮಾರುಕಟ್ಟೆಯಲ್ಲಿ ಕೂಡ ಸ್ಥಳೀಯ ಹಾಲಿನ ಸಿಹಿತಿಂಡಿ ಬರ್ಫಿ ಕೂಡ ದೊರೆಯುತ್ತದೆ. ಇತರೆ ಸಾಮಾನ್ಯವಾಗಿ ಮಾರಾಟವಾಗುವ ವಸ್ತುಗಳೆಂದರೆ ಉಣ್ಣೆ, ಪಶ್ಮಿನಾ ಶಾಲುಗಳು ಮತ್ತು ರೇಷ್ಮೆಯ ರತ್ನಗಂಬಳಿಗಳು. ಇವು ಇಲ್ಲಿ ಸೂಕ್ತ ಬೆಲೆಗೆ ದೊರಕುತ್ತವೆ.


Click it and Unblock the Notifications