ಮೇಘಾಲಯದ ಜೈನ್ತಿಯಾ ಹಿಲ್ಸ್ ಲಸ್ಕೈನ್ ಬ್ಲಾಕ್ ನಲ್ಲಿರುವ ಲೂಕ್ಸಿ ಗ್ರಾಮದಲ್ಲಿ ಲೂಕ್ಸಿ(ಕುಪ್ಲಿ) ಉದ್ಯಾನದಲ್ಲಿದೆ. ಇದು ಜಿಲ್ಲಾ ಕೇಂದ್ರದಿಂದ ಸರಿಸುಮಾರು 40 ಕಿ.ಮೀ. ದೂರದಲ್ಲಿದೆ. ಅರಣ್ಯ ಇಲಾಖೆಯಡಿಯಲ್ಲಿ ಜಿಲ್ಲಾಡಳಿತವು ಉದ್ಯಾನಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಾಣ ಮಾಡಿ ಉದ್ಯಾನವನ್ನು ಅಭಿವೃದ್ಧಿಪಡಿಸುತ್ತಿದೆ. ಟಗರು ಆಶ್ರಯ, ವಿವ್ಯೂ ಪಾಯಿಂಟ್ ನಲ್ಲಿ ಬೇಲಿ ಮತ್ತು ಜನರು ವಿಶ್ರಾತಿ ಪಡೆಯಲು ಬೆಂಚುಗಳನ್ನು ನಿರ್ಮಿಸಲಾಗಿದೆ.
ಉದ್ಯಾನದಲ್ಲಿ ಮಕ್ಕಳಿಗೆ ಸಮಯ ಕಳೆಯಲು ಸ್ಲೈಡ್ಸ್ ಮತ್ತು ಸ್ವಿಂಗ್ಸ್ ಇದೆ ಮತ್ತು ಇದು ಪ್ರವಾಸಿಗರನ್ನು ಸೆಳೆಯುತ್ತದೆ. ಒಟ್ಟಾರೆಯಾಗಿ ನಗರ ಜೀವನದ ಜಂಟಾಟ-ಗದ್ದಲದಿಂದ ಪಾರಾಗಿ ಆರಾಮ ಮಾಡಲು ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಅತ್ಯುತ್ತಮ ಸ್ಥಳ.
ಕುಪ್ಲಿ ನದಿ ದಡದಲ್ಲಿ ಮನೋರಂಜನಾ ಕೇಂದ್ರವಿದೆ. ಲೂಕ್ಸಿ ಸೆಂಟರ್ ಸ್ಕೂಲ್ ಆರ್ಗನೈಶೇಷನ್ ಹೆಸರಿನ ಎನ್ ಜಿಒ ಪ್ರತೀ ವರ್ಷ ಇಲ್ಲಿ ಬೋಟ್ ರೇಸಿಂಗ್ ಮತ್ತು ಈಜು ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಶಿಲ್ಲಾಂಗ್ ನಿಂದ ಪ್ರವಾಸಿ ಕಾರನ್ನು ಬಾಡಿಗೆಗೆ ಪಡೆದು ಲೂಕ್ಸಿ ಪಾರ್ಕ್ ಗೆ ತಲುಪಲು ಉತ್ತಮ ಮಾರ್ಗ.


Click it and Unblock the Notifications