ದೇವ್‍ಗುರಡಿಯ ಶಿವ ಮಂದಿರ್ ಎಂಬುದು ಇಂದೋರ್ ನಗರದಿಂದ 8 ಕಿ.ಮೀ ದೂರದಲ್ಲಿರುವ ದೇವ್‍ಗುರಡಿಯ ಎಂಬ ಸಣ್ಣ ಹಳ್ಳಿಯಲ್ಲಿ ನೆಲೆಗೊಂಡಿದೆ. ಕ್ರಿ.ಶ.7ನೇ ಶತಮಾನದಲ್ಲಿ ಕಲ್ಲು ಬಂಡೆಗಳಿಂದ ಕಡೆದು ನಿರ್ಮಿಸಲಾಗಿರುವ ಈ ಪ್ರಾಚೀನ ದೇವಾಲಯವನ್ನು ಶಿವನಿಗಾಗಿ ನಿರ್ಮಿಸಲಾಗಿದೆ. ನಂತರ ಇದನ್ನು 18ನೇ ಶತಮಾನದಲ್ಲಿ ರಾಣಿ ಅಹಿಲ್ಯಾ ಬಾಯಿ ಹೋಳ್ಕರ್ ರವರು ಜೀರ್ಣೋದ್ಧಾರ ಮಾಡಿದರು. ಸ್ಥಳೀಯರ ವಲಯದಲ್ಲಿ ಈ ದೇವಾಲಯವು ಗರುಡ ತೀರ್ಥವೆಂದೆ ಖ್ಯಾತಿ ಪಡೆದಿದೆ.
ಈ ದೇವಾಲಯದ ವೈಶಿಷ್ಟ್ಯವೇನೆಂದರೆ ಇಲ್ಲಿ ನೀರು ಹಸುವಿನ ಬಾಯಿಯನ್ನು ಹೋಲುವ ವಿನ್ಯಾಸವಿರುವ " ಗೋಮುಖ" ಎಂಬ ರಚನೆಯ ಮೂಲಕ ಹೊರಬರುತ್ತದೆ. ಮೂಲ ದೇವ್‍ಗುರಡಿಯ ಶಿವದೇವಾಲಯ ಮತ್ತು ಅದರ ಶಿವಲಿಂಗವು ನೆಲದಲ್ಲಿ ಹುದುಗಿಹೋಗಿದೆ. ಈಗ ಇರುವ ದೇವಾಲಯವನ್ನು ಅದೇ ಸ್ಥಳದಲ್ಲಿ ನಿರ್ಮಿಸಲಾಗಿದೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಪ್ರತಿ ವರ್ಷವು ಒಂದು ಜಾತ್ರೆ ನಡೆಯುತ್ತದೆ.


Click it and Unblock the Notifications