Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಬಿಜಸೆನ್ ಟೇಕ್ರಿ

ಬಿಜಸೆನ್ ಟೇಕ್ರಿ, ಇಂದೋರ್

1

ಇಂದೋರಿನಲ್ಲಿರುವ ಒಂದು ಬೆಟ್ಟದ ಮೇಲೆ ನೆಲೆಗೊಂಡಿರುವ ಬಿಜಸೆನ್ ಟೇಕ್ರಿಯು, ಬಿಜಸೆನ್ ಮಾತಾರವರ ಒಂದು ಸುಂದರವಾದ ದೇವಾಲಯವಾಗಿದೆ. ಬಿಜಸೆನ್ ಮಾತಾ ಎಂಬುದು ದುರ್ಗಾ ದೇವಿಯ ಒಂದು ರಹಸ್ಯ ಅವತಾರವೆಂದು ನಂಬಲಾಗುತ್ತದೆ. ಬಿಜಸೆನ್ ಟೇಕ್ರಿ ಎಂದೆ ಖ್ಯಾತಿ ಪಡೆದಿರುವ ಈ ಸಣ್ಣ ದೇವಾಲಾಯವನ್ನು 1920ರಲ್ಲಿ ನಿರ್ಮಾಣ ಮಾಡಲಾಯಿತು. ಈ ದೇವಾಲಯದ ಬಳಿಯಿಂದ ನಾವು ಕೆಳಗೆ ಇರುವ ನಗರದ ನಯನ ಮನೋಹರವಾದ ಪಕ್ಷಿನೋಟವನ್ನು ಕಾಣಬಹುದು. ಪ್ರತಿ ವರ್ಷ ನವರಾತ್ರಿಯ ಸಮಯದಲ್ಲಿ ಇಲ್ಲಿ ಜಾತ್ರೆಯು ಜರುಗುತ್ತದೆ. ಈ ಜಾತ್ರೆಗೆ ಹತ್ತಿರದ ಮತ್ತು ದೂರದ ಊರುಗಳಿಂದ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ.

ಈ ಬೆಟ್ಟದ ಮೇಲಿನಿಂದ ಸೂರ್ಯಾಸ್ತಮಾನವನ್ನು ನೋಡುವುದು ನಿಜಕ್ಕೂ ಒಂದು ಚೇತೋಹಾರಿ ಅನುಭವವಾಗಿರುತ್ತದೆ. ಈ ದೇವಾಲಯಕ್ಕೆ ಸಮೀಪದಲ್ಲಿ ಹೋಳ್ಕರ್ ರಾಜರ ಅತಿಥಿ ಗೃಹವಿದೆ. ಆದರೆ ಇಂದು ಇದನ್ನು ಗಡಿ ರಕ್ಷಣಾ ಪಡೆಯ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. ಇಂದೋರಿಗೆ ಭೇಟಿ ನೀಡುವ ಪ್ರವಾಸಿಗರು ಚಿಕ್ಕದಾದರು ಸುಂದರವಾಗಿರುವ ಈ ದೇವಾಲಯಕ್ಕೆ ತಪ್ಪದೆ ಭೇಟಿ ನೀಡಲು ಸಾಧ್ಯವಾಗುವಂತೆ ಯೋಜನೆ ಹಾಕಿಕೊಳ್ಳುವುದು ಉತ್ತಮ. ಈ ದೇವಾಲಯಕ್ಕೆ ಇಂದೋರಿನ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿಂದ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun