Search
  • Follow NativePlanet
Share
ಮುಖಪುಟ » ಸ್ಥಳಗಳು » ಹಿಸಾರ್ » ಆಕರ್ಷಣೆಗಳು » ಅಗ್ರೋಹ ದಿಬ್ಬ

ಅಗ್ರೋಹ ದಿಬ್ಬ, ಹಿಸಾರ್

1

ಸ್ಥಳೀಯವಾಗಿ ಥೇರ್ ಎಂದೂ ಕರೆಯಲಾಗುವ ಅಗ್ರೋಹ ದಿಬ್ಬ ಪ್ರಾಚ್ಯವಸ್ತು ಸಂಶೋಧನಾಧ್ಯಯನ ಸ್ಥಳ. 1.5 ಕಿ.ಮೀ. ದೂರದಲ್ಲಿರುವ ಊರು ಅಗ್ರೋಹದಿಂದಾಗಿ ಇದಕ್ಕೂ ಅಗ್ರೋಹ ದಿಬ್ಬ ಎಂದು ಕರೆಯಲಾಗುತ್ತದೆ.

ಇವುಗಳ ಉತ್ಖನನದ ಶ್ರೇಯಸ್ಸು 1888-89ರಲ್ಲಿ ಉತ್ಖನ ಕೆಲಸ ಆರಂಭಿಸಿದ ಪ್ರಾಚ್ಯವಸ್ತು ಶಾಸ್ತ್ರಜ್ಞ ಸಿ.ಟಿ. ರೋಜರ್ ಅವರಿಗೆ ಸಲ್ಲಬೇಕು. ಮುಂದೆ 1978-79ರಲ್ಲಿ ಹರ್ಯಾಣಾದ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳಾಗಿದ್ದ ಜೆ.ಎಸ್. ಖತ್ರಿ ಮತ್ತು ಆಚಾರ್ಯ ಅವರು ಉತ್ಖನನವನ್ನು ಮುಂದುವರಿಸಿದರು.

ಇಲ್ಲಿ ಸಿಕ್ಕಿರುವ ಕೆಲ ಐತಿಹಾಸಿಕ ವಸ್ತುಗಳು ಕ್ರಿ.ಪೂ. 3 ಮತ್ತು 4ನೇ ಶತಮಾನ ಹಾಗು ಕ್ರಿ.ಶ. 13 ಮತ್ತು 14ನೇ ಶತಮಾನಕ್ಕೆ ಸೇರಿದ್ದವಾಗಿವೆ. ರಕ್ಷಣಾ ಗೋಡೆ, ಮಂದಿರದ ಕೋಣೆ, ವಾಸಸ್ಥಳದ ಅವಶೇಷಗಳು ಸೇರಿದಂತೆ ಸುಮಾರು 7000 ಪುರಾತನ ವಸ್ತುಗಳು ಇಲ್ಲಿ ಸಿಕ್ಕಿವೆ.

ರೋಮನ್, ಕುಶಾನರು, ಯೌದೇಯ ಮತ್ತು ಗುಪ್ತರ ಕಾಲಕ್ಕೆ ಸೇರಿದ್ದವೆನ್ನಲಾದ ಬೆಳ್ಳಿ ಮತ್ತು ಕಂಚಿನ ವಿವಿಧ ಆಕಾರದಲ್ಲಿರುವ ನಾಣ್ಯಗಳು ಉತ್ಖನನದಲ್ಲಿ ಸಿಕ್ಕಿವೆ. ಪ್ರಾಕೃತಿಕ ಭಾಷೆಯಲ್ಲಿ ಅವುಗಳ ಮೇಲೆ ಕೆತ್ತನೆ ಮಾಡಲಾಗಿದೆ. ಪ್ರಾಕೃತಿಕ ಭಾಷೆಯಲ್ಲಿ ಬರೆಯಲಾಗಿರುವ ಸೀಲುಗಳು, ದೊಡ್ಡ ಪ್ರಮಾಣದಲ್ಲಿ ಅರೆಅಮೂಲ್ಯವಾದ ಕಲ್ಲುಗಳು, ಕಬ್ಬಿಣ ಮತ್ತು ತಾಮ್ರದ ಸಾಮಗ್ರಿಗಳು, ಕಲ್ಲಿನ ಶಿಲ್ಪಗಳು, ಮರಳಿನ ಮೂರ್ತಿಗಳು, ಮುಖವಾಡಗಳು, ಟೆರ್ರಕೋಟ ಪ್ರಾಣಿಗಳು, ಪಾತ್ರೆಪಡಗ ಮತ್ತು ಆಟಿಕೆಗಳು ಇಲ್ಲಿ ದೊರೆತಿವೆ.

ದಿಬ್ಬದ ಒಂದು ಬದಿಯಲ್ಲಿ ದೇವಸ್ಥಾನವೊಂದರ ಸಂಕೀರ್ಣವಿದ್ದರೆ ಮತ್ತೊಂದು ಬದಿಯಲ್ಲಿ ಶೀಲಾ ಮಾತಾ ದೇವಸ್ಥಾನವಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed