Search
  • Follow NativePlanet
Share
ಮುಖಪುಟ » ಸ್ಥಳಗಳು » ಹಿಸಾರ್ » ಆಕರ್ಷಣೆಗಳು » ಸೇಂಟ್ ಥಾಮಸ್ ಚರ್ಚ್

ಸೇಂಟ್ ಥಾಮಸ್ ಚರ್ಚ್, ಹಿಸಾರ್

2

ಹರ್ಯಾಣಾದ ಹಿಸಾರ್ ನಗರದ ರಾಷ್ಟ್ರೀಯ ಹೆದ್ದಾರಿ ನಂ.10ರಲ್ಲಿ ಈ ಸೇಂಟ್ ಥಾಮಸ್ ಚರ್ಚ್ ಉಪಸ್ಥಿತವಿದೆ. ಈ ಚರ್ಚ್ ನಿರ್ಮಾಣದ ಕೆಲಸ ಡಿಸೆಂಬರ್ 1860ರಲ್ಲಿ ಶುರುವಾಗಿ 1864ರ ಮೇ ತಿಂಗಳಲ್ಲಿ ಮುಕ್ತಾಯವಾಯಿತು. ಏಸು ಕ್ರಿಸ್ತನ 12 ಶಿಸ್ತುವಾದಿಗಳಲ್ಲಿ ಒಬ್ಬರಾದ ಸೇಂಟ್ ಥಾಮಸ್ ಗೆ ಇದನ್ನು ಸಮರ್ಪಿಸಲಾಗಿದೆ. ಆಗಿನ ಕಾಲದಲ್ಲಿ ಚರ್ಚ್ ನಿರ್ಮಾಣಕ್ಕೆ ತಲುಲಿದ ವೆಚ್ಚ ಸುಮಾರು 4500 ರು. ಈ ಪವಿತ್ರ ದೇಗುಲದ ಉದ್ಘಾಟನೆಯನ್ನು 1865ರಲ್ಲಿ ಕೋಲ್ಕತಾದ ಬಿಶಪ್ ಜಾರ್ಜ್ ಎಡ್ವರ್ಡ್ ಲಿಂಚ್ ಕಾಟನ್ ಅವರು ಮಾಡಿದರು.

ಈ ಚರ್ಚ್ ನ ಕಟ್ಟಡದ ವಿನ್ಯಾಸ ವಿಕ್ಟೋರಿಯನ್ ಶೈಲಿಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ಈ ಚರ್ಚ್ ನಲ್ಲಿ ಆಲ್ಟರ್ (ಚರ್ಚ್ ನಲ್ಲಿರುವ ಮೇಜು), ಪಲ್ಪಿಟ್ (ಬೋಧನೆಗೆ ಸೀಮಿತವಾದ ಎತ್ತರದ ಅಂಕಣ), ವೆಸ್ಟ್ರಿ (ಕಚೇರಿ ಕೆಲಸಕ್ಕಾಗಿ ಇರುವ ಕಚೇರಿ), ಬಾಪ್ಟಿಸ್ಟರಿ (ಕ್ರೈಸ್ತರಿಗೆ ನೀರು ಚಿಮುಕಿಸಿ ಹೆಸರು ಕೊಡುವ ಆಚರಣೆ) ಇದೆ.

ವೆಲ್ವೆಟ್ ಕರ್ಟನ್ ಗಳಿಂದ ಪಲ್ಪಿಟ್ ಅಲಂಕೃತಗೊಂಡಿದೆ. ಮುಖ್ಯ ಹಾಲ್ ಎರಡೂ ಬದಿ 2 ಅಡಿಯ ಗಾತ್ರದ ದಪ್ಪ ಗೋಡೆಗಳಿವೆ. ಇದನ್ನು 1325 ಚದರ ಮೀಟರ್ ವಿಸ್ತೀರ್ಣದಲ್ಲಿ ಕಟ್ಟಿಸಲಾಗಿದೆ. ಅಂದಾಜು 40 ಜನ ಕುಳಿತುಕೊಳ್ಳುವುದಕ್ಕೆ ಇಲ್ಲಿ ಅವಕಾಶವಿದೆ. 1874ರಲ್ಲಿ ಚರ್ಚ್ ಗಂಟೆಯನ್ನು ರೂರ್ಕಿಯಲ್ಲಿ ನಿರ್ಮಿಸಲಾಯಿತು.

ಚರ್ಚ್ ಆವರಣದಲ್ಲಿಯೇ ಒಂದು ಸ್ಮಶಾನ ಗೇಟ್ ಬಳಿ ಇದೆ. ಹಿಸಾರ್ ನ ಆಗಿನ ಕಲೆಕ್ಟರ್ ಆಗಿದ್ದ ಜಾನ್ ವೆಡ್ಡರ್ ಬರ್ನ್ ತನ್ನ ಪರಿವಾರ ಸಮೇತನಾಗಿ 1857ರಲ್ಲಿ ಭಾರತೀಯ ಯೋಧರಿಂದ ಹತನಾಗಿದ್ದನು. ಇವರ ಗೋರಿಗಳು ಇದೇ ಚರ್ಚ್ ಆವರಣದಲ್ಲಿವೆ.

1899ರವರೆಗೂ ಈ ಚರ್ಚ್ ನೊಳಗೆ ಪ್ರವೇಶಿಸಲು ಮತ್ತು ಪ್ರಾರ್ಥನೆ ಸಲ್ಲಿಸಲು ಕೇವಲ ಕ್ರೈಸ್ತ ಧರ್ಮೀಯರಿಗೆ ಮಾತ್ರ ಅವಕಾಶವಿತ್ತು. ದೆಹಲಿಯ ಬಿಶಪ್ ಆಗಿದ್ದ ರೆವರೆಂಡ್ ಎಫ್.ಆರ್. ವಿಲ್ಲಿಸ್ ಅವರು 1966ರ ಜನವರಿ 8ರಂದು ಈ ಚರ್ಚ್ ನ ವಾರ್ಷಿಕೋತ್ಸವ ಸೇವೆಯನ್ನು ಸಲ್ಲಿಸಿದರು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue