ಹಜೋದ ಆಕರ್ಷಣೀಯ ಸ್ಥಳಗಳಲ್ಲಿ ಗಣೇಶ ದೇವಾಲಯವೂ ಒಂದು. ಗಣೇಶ ದೇವಾಲಯ ದೇವ ಭಾವನ ಎಂದೂ ಪ್ರಸಿದ್ದಿ. ಪುರಾಣದ ಪ್ರಕಾರ, ಇಲ್ಲಿ ಎಲ್ಲಾ ದೇವತೆಗಳು ಬಂದು ಭೇಟಿಯಾಗುತ್ತಾರೆ, ಹಾಗಾಗಿ ಇದನ್ನು ದೇವ ಭಾವನ ಎಂದು ಹೆಸರು ಪಡೆದಿದೆ. ದೇವ ಭಾವನ ಎಂದರೆ ದೇವಾನು ದೇವತೆಗಳು ಭೇಟಿಯಾಗುವುದೆಂದು.
ಪ್ರಾಕೃತಿಕವಾಗಿ ಲಭ್ಯವಾಗಿರುವ ಶಿಲೆಯಲ್ಲಿ ಆನೆಯ ಮಾದರಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಗಣೇಶನ ದೊಡ್ದ ವಿಗ್ರಹದ ಬಂಡೆಯಲ್ಲಿ ಕೆತ್ತನೆ ಮಾಡಿದ ಆನೆಯ ಮಾದರಿಯಲ್ಲಿದೆ. ಪವಿತ್ರವಾದ ಸ್ಥಳವಿದು ಅಲ್ಲದೇ ಸ್ಥಳೀಯವಾಗಿ ಸುಂದರವಾಗಿದೆ. ಹಜೋ ದಲ್ಲಿ ಇರಬೇಕಾದರೆ ಪ್ರವಾಸಿಗರು ಏಕಾಂತದಲ್ಲಿ ಇರಬಹುದು, ಮತ್ತು ದೇವಾಲಯದ ಮೂಲೆಯಲ್ಲಿ ಧ್ಯಾನ ಮಾಡಬಹುದು. ಈ ದೇವಾಲಯವು ಶಾಂತಿ ಮತ್ತು ಏಕಾಂತತೆಗೆ ಸೂಕ್ತ ಸ್ಥಳ.
ಹಜೋ ಗುವಹಾಟಿಗೆ ಹತ್ತಿರವಾಗಿದ್ದು, ಒಂದು ದಿನದ ಪ್ರವಾಸ ಆಯೋಜಿಸಿ ಸಂಜೆಯ ವೇಳೆ ಗುವಹಾಟಿ ವಾಪಾಸ್ ತಲುಪಬಹುದು.


Click it and Unblock the Notifications