Search
  • Follow NativePlanet
Share
ಮುಖಪುಟ » ಸ್ಥಳಗಳು » ಹಜೊ » ಹವಾಮಾನ

ಹಜೊ ಹವಾಮಾನ

ಮಳೆಗಾಲದಲ್ಲಿ ಹಜೋ ಭೇಟಿ ನೀಡುವುದು ಸೂಕ್ತ. ಮಳೆಯಿಂದಾಗಿ ಹಜೋ ಪಟ್ಟಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಈ ಸಮಯದಲ್ಲಿ ಉಷ್ಣಾಂಸ ಹೆಚ್ಚೂ ಇಲ್ಲದೇ ಕಮ್ಮಿಯೂ ಇಲ್ಲದೇ ಸಾಮಾನ್ಯವಾಗಿರುತ್ತದೆ. ಮಳೆಗಾಲದಲ್ಲಿ ತಾಪಾಂಸ ಕಮ್ಮಿಯಾಗಿರುತ್ತದೆ. ಹಜೋದಲ್ಲಿ ಮಳೆಯಾಗುತ್ತಿದ್ದರೂ ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಪ್ರಯಾಸದಾಯಕವಲ್ಲ.

ಬೇಸಿಗೆಗಾಲ

ಬೇಸಿಗೆಯ ತಿಂಗಳಲ್ಲಿ ಇಲ್ಲಿ ಭಾರೀ ಬಿಸಿಲಿನ ವಾತಾವರಣವಿರುತ್ತದೆ. ಅತ್ಯಧಿಕ ಉಷ್ಣಾಂಸವಿರುವ ಈ ಸಮಯದಲ್ಲಿ ತಾಪಾಂಸ 38 ಡಿಗ್ರಿಯವರೆಗೆ ಸಾಗುತ್ತದೆ. ಕಮ್ಮಿ ಉಷ್ಣಾಂಸವೆಂದರೆ 22 ಡಿಗ್ರಿ ಸೆಲ್ಸಿಯಸ್. ಬೇಸಿಗೆ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಸಾಗುತ್ತದೆ. ಕೆಲವೊಮ್ಮೆ ಬೇಸಿಗೆ ಮಳೆಯಾಗುವ ಸಾಧ್ಯತೆಯಿದೆ.

ಮಳೆಗಾಲ

ಮಳೆಗಾಲ ಇಲ್ಲಿ ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗಿರುತ್ತದೆ. ಮಳೆ ಬೇಸಿಗೆ ಸಮಯದಲ್ಲಾದರೂ, ಮಳೆಗಾಲದ ಈ ಮೂರು ತಿಂಗಳ ಅವಧಿಯಲ್ಲಿ ಅತ್ಯಧಿಕವಾಗಿ ಮತ್ತು ಹಲವು ಬಾರಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅತ್ಯಧಿಕ ಮಳೆಯಾದರೂ ಈ ನಗರ ಪ್ರತಿವರ್ಷ ನವವಧುವಿನಂತೆ ಕಂಗೊಳಿಸುತ್ತದೆ.

ಚಳಿಗಾಲ

ಚಳಿಗಾಲ ಈ ಭಾಗದಲ್ಲಿ ಹೆಚ್ಚಿದ್ದರೂ ಅತ್ಯಂತ ಆಹ್ಲಾದಕರವಾಗಿರುತ್ತದೆ. ಚಳಿಗಾಲ ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ ಸಾಗುತ್ತದೆ. ಅತ್ಯಧಿಕ ಉಷ್ಣಾಂಸ ಈ ಸಮಯದಲ್ಲಿ 25 ಡಿಗ್ರಿ ಸೆಲ್ಸಿಯಸ್ ಮತ್ತು ಕಮ್ಮಿ ಉಷ್ಣಾಂಸವೆಂದರೆ ಏಳು ಡಿಗ್ರಿ ಸೆಲ್ಸಿಯಸ್. ಈ ಸಮಯದಲ್ಲಿ ಹಜೋ ಭೇಟಿ ನೀಡುವುದು ಸೂಕ್ತ.