ಹಜೋ ಅಸ್ಸಾಮಿನ ಪವಿತ್ರ ಯಾತ್ರಾಸ್ಥಳವಾಗಿದೆ. ಹಜೋನಲ್ಲಿ ನಾವು ಧಾರ್ಮಿಕ ಸಹಿಷ್ಣುತೆಯ ಭಾಗವಾಗಿ ಹಿಂದೂ, ಬೌದ್ದ ಮತ್ತು ಇಸ್ಲಾಂರ ಪವಿತ್ರ ಸ್ಥಳವನ್ನು ಕಾಣಬಹುದಾಗಿದೆ. ಹಿಂದೂ ದೇವರ ಮತ್ತು ದೇವಿಗಳ ದೇವಾಲಯ, ಬೌದ್ದ ದೇವರ ಮತ್ತು ಇಸ್ಲಾಮರ ಪವಿತ್ರ ಸಂತರ ದೇವಾಲಯ ಇಲ್ಲಿದೆ. ಇದರಿಂದಾಗಿ ಅಸ್ಸಾಂ ರಾಜಧಾನಿಗೆ ಹೆಚ್ಚಿನ ಜನಪ್ರಿಯತೆ ಬಂದಿದೆ. ಈ ಸಣ್ಣ ಪಟ್ಟಣ ಭಯಂಕರ ಬ್ರಹ್ಮಪುತ್ರಾ ನದಿಯ ತಟದಲ್ಲಿದ್ದು, ಅಸ್ಸಾಮಿನ ಕಮೃಪ್ ಜಿಲ್ಲೆಯಲ್ಲಿದೆ.
ಹಜೋ ಇತಿಹಾಸದ ಬಗ್ಗೆ ಹಲಾವರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ನಂಬಿಕೆಯ ಪ್ರಕಾರ ಕೋಚ್ ಸಾಮ್ರಾಜ್ಯದ ರಾಜಧಾನಿ ಇದಾಗಿದ್ದು, ನಂತರದ ದಿನಗಳಲ್ಲಿ ಮೊಘಲರ ಆಳ್ವಿಕೆಗೆ ಒಳಪಟ್ಟಿತು. ಶತಮಾನಗಳಿಂದ ಹಜೋವನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಹನ್ನೊಂದನೇ ಶತಮಾನದಲ್ಲಿ ಅಪೂರ್ಣಭಾವ ಮತ್ತು ಮನಿಕುಟಾ, ಹದಿನೆಂಟನೇ ಶತಮಾನದಲ್ಲಿ ಮನಿಕುಟ ಗ್ರಾಮ ಎಂದು ಕರೆಯುತ್ತಾರೆ. ಇನ್ನೊಂದು ಅಭಿಪ್ರಾಯದ ಪ್ರಕಾರ ಬುದ್ದನು ಇಲ್ಲಿ ನಿರ್ವಾಣನಾದನು ಎನ್ನುವುದೂ ಕೂಡಾ ನಂಬಿಕೆ.
ಹಜೋದಲ್ಲಿರುವ ಪ್ರವಾಸಿ ಸ್ಥಳಗಳು
ಹಜೋದಲ್ಲಿನ ಪ್ರಮುಖ ಯಾತ್ರಾ ಸ್ಥಳವೆಂದರೆ ಹಯಗ್ರೀವ ಮಾಧವ ದೇವಾಲಯ. ಈ ದೇವಾಲಯ ವಿಷ್ಣು ದೇವರಿಗೆ ನಿರ್ಮಿತವಾಗಿದೆ. ಮುಸ್ಲಿಮರು ಹಜೋಗೆ ಪೋವಾ ಮೆಕ್ಕಾಗೆ ಭೇಟಿ ನೀಡಲು ಬರುತ್ತಾರೆ. ಹಜೋದಲ್ಲಿ ಗಣೇಶನ ದೇವಾಲಯ, ಕೇದಾರೇಶ್ವರ ದೇವಾಲಯ, ಕಾಮೇಶ್ವರೇ ದೇವಾಲಯ, ಧೋಪುರಗಿರಿ ಸತ್ರಾ ಮತ್ತು ಜಾಯ್ ದುರ್ಗಾ ದೇವಾಲಯ. ಇವೆಲ್ಲವೂ ಹಜೋದಲ್ಲಿನ ಪ್ರಮುಖ ಸ್ಥಳಗಳು.
ಹಜೋ ತಲುಪುವುದು ಹೇಗೆ
ಗುವಹಾಟಿಯಿಂದ ಪಶ್ಚಿಮಕ್ಕೆ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿ ಹುಜೋ ಇದೆ. ಗುವಹಾಟಿಯಿಂದ ಹಜೋಗೆ ಬಸ್ ಸೌಲಭ್ಯವಿದೆ.
ಹಜೋ ವಾತಾವರಣ
ಹಜೋ ದಲ್ಲಿ ಬೇಸಿಗೆಯಲ್ಲಿ ಬಿಡು ಬೇಸಿಗೆಯಿದ್ದು, ಭಾರೀ ಉಷ್ಣಾಂಷವಿರುತ್ತದೆ, ಇದೇ ರೀತಿಯಲ್ಲಿ ಚಳಿಗಾಲದಲ್ಲಿ ವಿಪರೀಮಿತ ಚಳಿಯಿರುತ್ತದೆ. ಶರತ್ಕಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.


Click it and Unblock the Notifications