ಸುಪ್ರಸಿದ್ಧವಾದ ಕಾಮಾಖ್ಯ ದೇವಸ್ಥಾನದಿಂದ, ನೀಲಾಚಲ ಬೆಟ್ಟದ ತುದಿಯಲ್ಲಿ 165 ಕಿ. ಮೀ. ಮೇಲಿರುವ ಭುವನೇಶ್ವರಿ ದೇವಾಲಯವು ದೇವಿ ಭುವನೇಶ್ವರಿಯ ಗೌರವಾರ್ಥ ನಿರ್ಮಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ, ಭುವನೇಶ್ವರಿ ದೇವಿಯು 10 ಮಹಾವಿದ್ಯಾ ದೇವತೆಗಳ ಪೈಕಿ 4 ನೆಯವಳಾಗಿದ್ದು, ಈಕೆಯೂ ಸಹ ದೇವಿಯ ಒಂದು ಸ್ವರೂಪವಾಗಿದ್ದಾಳೆ. ದೇವಸ್ಥಾನವು ಕ್ರಿ.ಶ. 7 ನೆಯ ಮತ್ತು 9 ನೆಯ ಶತಮಾನದ ನಡುವಿನ ಕಾಲದಲ್ಲಿ ಕಟ್ಟಲಾದದ್ದು ಎಂದು ಹೇಳಲಾಗಿದೆ. ದೇವಳದ ಕಲ್ಲುಗಳ ರಚನೆಯು ಕಾಮಾಖ್ಯ ದೇವಸ್ಥಾನದ ಕಲ್ಲುಗಳ ರಚನೆಗೆ ಬಹಳಷ್ಟು ಹೋಲುತ್ತದೆ ಹಾಗೂ ಭಕ್ತಾದಿಗಳು ಮತ್ತು ಪ್ರವಾಸಿಗರಿಗೆ ಆನಂದಿಸಲು ದೇವಸ್ಥಾನವು ಪ್ರಶಾಂತ ಪರಿಸರವನ್ನು ಒದಗಿಸುತ್ತದೆ.
ದೇವಸ್ಥಾನವು ಪ್ರತಿದಿನವೂ ನೂರಾರು ಪ್ರವಾಸಿಗರಿಂದ ಗಿಜಿಗುಟ್ಟುತ್ತಿರುತ್ತದೆ. ಈ ದೇವಳವು ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಮತ್ತು ಪ್ರವಾಸಿಗರನ್ನು ಅಂಬುಬಚಿ ಮತ್ತು ಮನಷಾ ಪೂಜೆಯ ಸಂದರ್ಭದಲ್ಲಿ ಆಕರ್ಷಿಸುತ್ತದೆ. ಅನೇಕ ಪ್ರವಾಸಿಗರು ಕಾಮಾಖ್ಯ ದೇವಳದಿಂದ ಚಾರಣದ ಮಾರ್ಗವಾಗಿ, ಮೇಲ್ಮುಖವಾಗಿ, ಈ ದೇವಳವನ್ನು ತಲುಪಲು ಬಯಸುತ್ತಾರೆ. ಕಾರಣ, ಚಾರಣ ಮಾಡುವಾಗ ಇವರು ಘನ ಬ್ರಹ್ಮಪುತ್ರ ನದಿಯ ರೋಮಾಂಚಕ ದೃಶ್ಯವೈಭವವನ್ನು ಬೆಟ್ಟದ ಕೆಳಗೆ ಕಾಣುವ ಅವಕಾಶವಿರುತ್ತದೆ. ಮಾತ್ರವಲ್ಲದೇ, ನೀವು ಭುವನೇಶ್ವರ ದೇವಸ್ಥಾನದಿಂದ ಗುವಾಹಾಟಿ ನಗರದ ಒಂದು ವಿಹಂಗಮ ನೋಟವನ್ನು ಸವಿಯಬಹುದು.


Click it and Unblock the Notifications