ಉಗ್ರತಾರಾ ದೇವಸ್ಥಾನವು ಉಗ್ರೋ ತಾರಾ ದೇವಸ್ಥಾನವೆಂದೂ ಕರೆಯಲ್ಪಡುತ್ತಿದ್ದು, ಇದು ಕಾಳಿ ದೇವಿಗೆ ಅರ್ಪಿತವಾಗಿರುವ ದೇವಸ್ಥಾನವಾಗಿದೆ. ಇದು ಜೊರ್ ಪುಖುರಿ ಉಜಾನ್ ಬಜಾರ್ ನ ಪಶ್ಚಿಮ ಬದಿಯಲ್ಲಿದೆ. ಉಗ್ರತಾರಾ ದೇವಸ್ಥಾನವು ಅಸ್ಸಾಂ ನ ಅತ್ಯಂತ ಪ್ರಮುಖವಾದ ಯಾತ್ರಾ ಕೇಂದ್ರವಾಗಿದೆ. ಈ ದೇವಸ್ಥಾನವು ಕೇಂದ್ರಸ್ಥಾನದಲ್ಲಿರುವುದರಿಂದ, ಇದು ಗುವಾಹಾಟಿ ನಗರದಲ್ಲಿನ ಅತೀ ಸುಲಭವಾಗಿ ತಲುಪಬಹುದಾದ ದೇವಸ್ಥಾನಗಳ ಪೈಕಿ ಒಂದಾಗಿದೆ.
ಭಗವತಿ ಪಾರ್ವತಿ ದೇವಿಯ ಮತ್ತೊಂದು ರೂಪವಾದ ಉಗ್ರ ತಾರಾ ದೇವಿಯು ಈ ದೇವಸ್ಥಾನದಲ್ಲಿ ನೆಲೆನಿಂತಿದ್ದಾಳೆ ಎಂದು ನಂಬಲಾಗಿದೆ. ಈ ದೇವಳದ ಅತೀ ಪವಿತ್ರ ಜಾಗವು ದೇವಿಯ ಯಾವುದೇ ಮೂರ್ತಿಯನ್ನು ಹೊಂದಿಲ್ಲ, ಬದಲಾಗಿ ನೀರಿನಿಂದ ತುಂಬಿರುವ ಒಂದು ಸಣ್ಣ ಹೊಂಡವು ದೇವತೆಯ ರೂಪದಲ್ಲಿ ಪೂಜಿಸಲ್ಪಡುತ್ತದೆ. ಭೌದ್ಧಧರ್ಮಕ್ಕೆ ಸಂಬಂಧಿಸಿದ ಹಾಗೆ ಒಂದು ದಂತಕಥೆಯಿದ್ದು, ಈ ಕಾರಣಕ್ಕಾಗಿ ಇದು ಭೌದ್ಧಧರ್ಮೀಯರಿಗೂ ಕೂಡ ಪೂಜನೀಯವಾಗಿದೆ.
ಅಹೋಮ್ ಸಾಮ್ರಾಜ್ಯದ ದೊರೆ ಶಿವ ಸಿಂಗ್ ಕ್ರಿ.ಶ. 1725 ರಲ್ಲಿ ನಿರ್ಮಿಸಿದ್ದು, ಇದೊಂದು ಪ್ರಮುಖವಾದ ಶಕ್ತಿ ಸ್ಥಳವಾಗಿದೆ. ಗುವಾಹಾಟಿಯ ಇತರ ಅನೇಕ ಸ್ಮಾರಕಗಳಂತೆ ಉಗ್ರತಾರಾ ದೇವಾಲಯವೂ ಕೂಡ 1897 ರಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಭಾಗಶಃ ಶಿಥಿಲಗೊಂಡಿತ್ತು. ಈಗ ಭವ್ಯವಾಗಿ, ಎತ್ತರವಾಗಿ ತಲೆಯೆತ್ತಿ ನಿಂತಿರುವ ದೇವಸ್ಥಾನವು ಅನೇಕ ಮಾರ್ಪಾಡುಗಳು ಮತ್ತು ಜೀರ್ಣೋಧ್ಧಾರಗಳ ಫಲಶೃತಿಯಾಗಿದೆ.