ಗೋಂಡೋಲಾ ರೈಡ್, ಗುಲ್‌ಮಾರ್ಗ್ ನ ಇನ್ನೊಂದು ಆಕರ್ಷಣೆ. ಇದು ಅಸಲಿಯಾಗಿ ಕೇಬಲ್ ಕಾರು ವ್ಯವಸ್ಥೆ ಆಗಿದೆ. ಇಲ್ಲಿ ಪ್ರವಾಸಿಗರು ಐದು ಕಿ.ಮೀ. ನಷ್ಟು ದೂರವನ್ನು ಕೇಬಲ್ ಕಾರಿನ ಎರಡು ಹಂತದ ಮೂಲಕ ಸಾಗಬಹುದು. ಇದು ಗುಲ್‌ಮಾರ್ಗ್ ದಿಂದ ಕೊಂಗದೂರ್‌ಗೆ ತಲುಪುತ್ತದೆ. ಹಾಗೂ ಕೊಂಗದೂರಿನಿಂದ ಅಫರ್ವತ್ ಪರ್ವತಕ್ಕೆ ತಲುಪುತ್ತದೆ. ಕೊಂಗದೂರಿನ ಗೋಂಡೋಲಾ ಸ್ಟೇಷನ್ 3099 ಮೀಟರ್ ಎತ್ತರದಲ್ಲಿ ನೆಲೆಸಿದೆ. ಇನ್ನು ಅಫರ್ವತ ಪರ್ವತವು 3979 ಮೀಟರ್ ಎತ್ತರದಲ್ಲಿದೆ. ಗೋಂಡೋಲಾ ರೈಡ್ ಸ್ಥಳ ವೀಕ್ಷಣೆಗೆ ಹೇಳಿ ಮಾಡಿಸಿದಂತಿದೆ.
ಗುಲ್‌ಮಾರ್ಗ್ ದಿಂದ ಕೊಂಗದೂರು ಮಾರ್ಗದಲ್ಲಿ ಒಟ್ಟು 19 ಟವರ್‌ಗಳನ್ನು ನಿರ್ಮಿಸಲಾಗಿದೆ. ಇದು ಪ್ರತಿ ಘಂಟೆಗೆ 1500 ಮಂದಿಯನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ಇನ್ನು ಕೊಂಗದೂರುನಿಂದ ಅಫರ್ವವತ್‌ಗೆ ತಲುಪುವ ಮಾರ್ಗದಲ್ಲೂ 19 ಟವರ್‌ಗಳಿದ್ದು, ಇದು ಘಂಟೆಗೆ 600 ಮಂದಿ ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ಹಿಮಾಲಯದ ಆಕರ್ಷಕ ನೋಟ ಸವಿಯಲು ಈ ವ್ಯವಸ್ಥೆ ಸುಂದರವಾದ ಅವಕಾಶವನ್ನು ಒದಗಿಸುತ್ತದೆ.


Click it and Unblock the Notifications