ಗುಲ್ಮಾರ್ಗ್ ನಲ್ಲಿ ಗಾಲ್ಫ್ಕೋರ್ಸ್ 1904 ರಲ್ಲಿ ಸ್ಥಾಪಿತವಾಯಿತು. ಇಲ್ಲಿ ಮೊದಲ ಟೂರ್ನಾಮೆಂಟ್ ಆಯೋಜನೆಯಾಗಿದ್ದು 1922 ರಲ್ಲಿ. ಬ್ರಿಟೀಷರು ಈ ಹಚ್ಚ ಹಸಿರು ಮೈದಾನದಲ್ಲಿ ಗಾಲ್ಫ್ ಆಟ ಆಡಿದ್ದರು. ಒಂದು ಅತ್ಯಾಕರ್ಷಕ ಗಾಲ್ಫ್ಕೋರ್ಟ್ ಎಂಬ ಹೆಗ್ಗಳಿಕೆ ಕೂಡ ಇದು ಹೊಂದಿದೆ. ಸಮುದ್ರ ಮಟ್ಟದಿಂದ ಈ ಮೈದಾನ 2650 ಮೀಟರ್ ಎತ್ತರದಲ್ಲಿದೆ. ವಿಶ್ವದಲ್ಲಿಯೇ ಅತಿ ಎತ್ತರದ ಗಾಲ್ಫ್ಕೋರ್ಟ್ ಎಂಬ ಖ್ಯಾತಿ ಹೊಂದಿದೆ. ಜಮ್ಮು- ಕಾಶ್ಮೀರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಡಿ ಇದು ನಿರ್ವಹಣೆಯಾಗುತ್ತಿದೆ. ತಾತ್ಕಾಲಿಕ ಸದಸ್ಯತ್ವ ನೀಡಿ ತರಬೇತಿ ನೀಡಲಾಗುತ್ತದೆ ಇಲ್ಲಿ.