ಬಾಬಾ ರೇಷಿ ಮಂದಿರವು ಜನಪ್ರಿಯ ಮುಸ್ಲಿಂ ಸಂತ ಬಾಬಾ ರೇಷಿಯ ಆಲಯವಾಗಿದೆ. ಗುಲ್‌ಮಾರ್ಗ್ ನಿಂದ 5 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಇದು 2133 ಮೀಟರ್ ಎತ್ತರದಲ್ಲಿದೆ. ಇವರು ರಾಜಾ ಝಾನ್-ಉಲ್-ಅಬಿದಿನ್ ಆಸ್ಥಾನದಲ್ಲಿ ಖ್ಯಾತ ವ್ಯಕ್ತಿ ಆಗಿದ್ದರು. ಈ ರಾಜನು ಕಾಶ್ಮೀರವನ್ನು15 ನೇ ಶತಮಾನದಲ್ಲಿ ಆಳಿದ್ದ. ಈ ಸಂತರು ತಮ್ಮ ಕೊನೆಯುಸುರಿನವರೆಗೆ ಅಂದರೆ 1480 ರ ತನಕ ರಾಜನ ಆಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು.
ಈ ಮಂದಿರವನ್ನು ಮುಘಲ್ ಹಾಗೂ ಪರ್ಶಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಮಂದಿರದಲ್ಲಿರುವ ಟಾಂಬ್(ಸಮಾಧಿ)ತನ್ನ ಅತ್ಯಾಕರ್ಷಕವಾದ ಮರದ ಕೆತ್ತನೆಯ ಕೆಲಸದ ಮೂಲಕ ಗಮನ ಸೆಳೆಯುತ್ತದೆ. ಮಸೀದಿಯ ಹೊರಗೆ ಆಕರ್ಷಕ ಉದ್ಯಾನವನ್ನು ನಿರ್ಮಿಸಲಾಗಿದೆ. ಏಕಕಾಲಕ್ಕೆ ಸಾವಿರಾರು ಭಕ್ತರಿಗೆ ಪ್ರವೇಶಿಸಲು ಅನುಕೂಲವಾದ ಗೃಹ ಇದಾಗಿದೆ.
ಪ್ರವಾಸಿಗರು ಇಲ್ಲಿನ ಸ್ಥಳೀಯ ಸಂಚಾರ ಮಾರ್ಗ ಹಾಗೂ ಸಾಧನ ಬಳಸಿ ಬರಬೇಕು. ಅಂದರೆ ಇಲ್ಲಿನ ಸ್ಲೆಡ್ಜ್(ಒಂದು ರೀತಿಯ ಜಾರುಬಂಡೆ), ಫೀಲ್ಡ್ ಚುಟ್ಸ್(ಸಾಗುವ ಒಂದು ವಿಧಾನ) ಹಾಗೂ ಕುದುರೆಗಳ ಮೂಲಕ ಸಾಗಬೇಕು. ಬೆಳಗ್ಗೆ 9 ರಿಂದ ಸಂಜೆ 5ರ ನಡುವಿನ ಸಮಯ ಪ್ರಯಾಣಕ್ಕೆ ಸೂಕ್ತ.


Click it and Unblock the Notifications