Search
 • Follow NativePlanet
Share

ಗಂಜಾಂ : ಹಬ್ಬಗಳು ಮತ್ತು ಕಡಲ ತೀರಗಳ ನೆಲೆ

21

ಗಂಜಾಂ - ಒಡಿಶಾ ರಾಜ್ಯದ ಪ್ರಮುಖ ಜಿಲ್ಲೆಯಾಗಿದೆ. ಈ ಸ್ಥಳದ ಹೆಸರು ಗನ-ಇ-ಆಮ್ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ ಆಹಾರ ಧಾನ್ಯಗಳ ಸಂಗ್ರಹ ಮಳಿಗೆ ಎಂದರ್ಥ. ಗಂಜಾಂ ಬಂಗಾಳ ಕೊಲ್ಲಿಯ ತೀರದ ಮೇಲೆ ನೆಲೆಗೊಂಡಿದೆ. ಇದು ಅಸಂಖ್ಯಾತ ವಿಲಕ್ಷಣವಾದ ಕಡಲ ತೀರಗಳನ್ನು ಹೊಂದಿದ್ದು, ವರ್ಷವೀಡಿ ಪ್ರವಾಸಿಗರನ್ನು ತಮ್ಮತ್ತ ಆಕರ್ಷಿಸಿ ಪ್ರವಾಸೋದ್ಯಮವನ್ನು ವರ್ಧಿಸುತ್ತವೆ. ಸಮೃದ್ಧ ಹಸಿರಿನಿಂದ ಅಲಂಕರಿಸಿಕೊಂಡಿರುವ ಇದು ಬೃಹತ್ ಪರ್ವತಗಳು ಮತ್ತು ಅದ್ಭುತ ನದಿಗಳನ್ನು ಹೊಂದಿದೆಯಲ್ಲದೇ, ಜೊತೆಗೆ ಸುಂದರವಾದ ಸ್ಥಳವು ಪ್ರಾಚೀನ ಅವಶೇಷಗಳ ಶ್ರೀಮಂತಿಕೆಯನ್ನು ಹೊಂದಿದೆ.

ಗಂಜಾಂ ಪವಿತ್ರ ಮತ್ತು ಪುರಾತನವಾದ ದೇವಾಲಯಗಳಿಂದ ಕೂಡಿದೆ. ಈ ಸ್ಥಳದಲ್ಲಿ ಸಾವಿರಾರು ಭಕ್ತರು ಭಗವಂತನ ಪರಮಾಧಿಕಾರದ ಪವಾಡಗಳನ್ನು ನೋಡಲು ಗುಂಪುಗುಂಪಾಗಿ ಬರುತ್ತಾರೆ. ಡೊಲೊ ಯಾತ್ರಾ, ತಾರಾತಾರಿಣಿ ಮೇಳ, ದಂಡ ಯಾತ್ರಾ ಮತ್ತು ಠಾಕೂ ರಾಣಿ ಯಾತ್ರಾ  ಮುಂತಾದ ಹಬ್ಬಗಳ ಸಂದರ್ಭಗಳಲ್ಲಿ ಗಂಜಾಂ ಪ್ರವಾಸೋದ್ಯಮವು ಹೆಚ್ಚು ಗರಿಗೆದರುತ್ತದೆ. ಈ ಹಬ್ಬಗಳಲ್ಲಿ ದೇಶದ ವಿವಿಧ ಭಾಗಗಳಿಂದ ಅಪಾರ ಪ್ರಮಾಣದ ಭಕ್ತರು ಭಾಗವಹಿಸಿ ಹಬ್ಬಗಳ ಕಳೆಯನ್ನು ಹೆಚ್ಚಿಸುತ್ತಾರೆ. ಸೊಗಸಾದ ಕರಕುಶಲ ಕಲೆಗಳಾದ ಶಿಲ್ಪ ಕೆತ್ತನೆಗಳು, ಬಿದಿರು ಕೆತ್ತನೆಗಳು, ಮರ ಕೆತ್ತನೆಗಳು, ಕಂಚು ಮತ್ತು ತಾಮ್ರವಿನ್ಯಾಸಗಳು ಗಂಜಾಂ ಜಿಲ್ಲೆಯ ವೈಭವಕ್ಕೆ ಇನ್ನು ಹೆಚ್ಚಿನ ಮೆರಗನ್ನು ನೀಡಿವೆ.

ಗಂಜಾಂ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಗಂಜಾಂ ಅನ್ನು ಪ್ರಕೃತಿಯ ಆಟ ಎಂದು ಕರೆಯಬಹುದು. ಏಕೆಂದರೆ ಇದು ಅನೇಕ ದೇವರಗಳ ವಾಸಿಸುವಿಕೆಯಿಂದ ಶಕ್ತಿಯುತವಾಗಿದೆ. ಗಂಜಾಂ ಪ್ರವಾಸೋದ್ಯಮವು ವಿಶೇಷ ಕಡಲ ತೀರಗಳು, ಹಚ್ಚು ಹಸುರಿನ ಕಣಿವೆಗಳು, ದೈತ್ಯಾಕಾರದ ಬೆಟ್ಟಗಳು ಮತ್ತು ನಿಗೂಢ ಗುಹೆಗಳು , ಆಕರ್ಷಕ ಗುಹೆಗಳು ಮುಂತಾದವುಗಳಿಂದ ಅಭಿವೃದ್ಧಿಗೊಂಡಿದೆ. ಸುಂದರ ಮತ್ತು ಮರಳು ಕಡಲು ತೀರಗಳಾದ ಅರ್ಯಪಳ್ಳಿ ಮತ್ತು ಹುಮ ಕಾಂತಿಯಗಡ ಇವುಗಳನ್ನು ಜಗತ್ತಿನ ಯಾವ ಕಡಲ ತೀರಗಳೊಂದಿಗೆ ಹೋಲಿಸುವುದು ಅಸಾಧ್ಯ. ಗಿರಿಸೋಲಾ ವನ್ನು ಆಂಧ್ರಪ್ರದೇಶದಿಂದ ಒರಿಸ್ಸಾಕ್ಕೆ ಇರುವ ಪ್ರವೇಶದ್ವಾರ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಇದು ಪತಿ ಸೊನೆಪುರ ಕಡಲ ತೀರ ಮತ್ತು ಭೈರವಿ ದೇವಾಲಯಗಳಿಗೆ ಹತ್ತಿರದಲ್ಲಿದ್ದು, ಗಿರಿಸೋಲಾವನ್ನು ಪ್ರವಾಸಿಗರ ಪ್ರಿಯ ತಾಣವನ್ನಾಗಿ ಮಾಡುತ್ತವೆ.

ಅಸ್ಕಾದಿಂದ ಬಗುಡಾಕ್ಕೆ ಬರುವ ದಾರಿಯಲ್ಲಿ, ಭೇತನಾನಿ ಎಂಬ ಸ್ಥಳವಿದ್ದು, ಇಲ್ಲಿ ಪ್ರವಾಸಿಗರು ಕೆಲ ಸಮಯವನ್ನು ಕಳೆದು, ಇಲ್ಲಿ ಇರುವ ಬ್ಲಾಕ ಬಕದ ಸುಂದರ ವಿಹಂಗಮ ದೃಶ್ಯವನ್ನು ನೋಡಿ ಆನಂದಿಸಬೇಕು. ಗಂಜಾಂ ಇದು ಅನೇಕ ಪ್ರಾಚೀನ ಮತ್ತು ಪವಿತ್ರ ದೇವಾಲಯಗಳನ್ನು ಹೊಂದಿದ್ದು ಗಂಜಾಂ ಜಿಲ್ಲೆಯನ್ನು ಆಧ್ಯಾತ್ಮಿಕ ಪರಮ ಸುಖದ ಗಮ್ಯಸ್ಥಾನವನ್ನಾಗಿ ನಿರ್ಮಿಸಿದೆ.ಅಥಗಡಪಟ್ಟಣ ಪ್ರಾಚೀನ ಮತ್ತು ವೈಭವಯುತವಾದ ಜಗನ್ನಾಥನ ದೇವಸ್ಥಾನವನ್ನು ಹೊಂದಿದೆ.

ಮಹುರಿಕಲುವಾ ದೇವಸ್ಥಾನವು ಇನ್ನೊಂದು ಪ್ರಮುಖ ಆಕರ್ಷಣೆಯಾಗಿದ್ದು ಗಂಜಾಂ ಮತ್ತು ಬೇಹಾರಮಪುರಕ್ಕೆ ಭೇಟಿ ಕೊಡುವ ಪ್ರತಿಯೊಬ್ಬ ಪ್ರವಾಸಿಗನು ಇದನ್ನು ನೋಡಲೇ ಬೇಕು. ನಿರ್ಮಲಝರ ಒಂದು ಅದ್ಭುತ ಸ್ಥಳವಾಗಿದ್ದು, ಇಲ್ಲಿ ವಿಷ್ಣುವಿನ ಪ್ರತಿಮೆಯ ಪಾದದಿಂದ ನೀರಿನ ತೊರೆಯು ಉದಯವಾಗುತ್ತದೆ. ಇದನ್ನು ನಂಬಲು ಅಸಾಧ್ಯವಾದರೂ ಸಹ ಇದು ನಿಜವಾಗಿದೆ. ಪಂಚಮ ಮತ್ತು ಜಾಲೇಶ್ವರದಲ್ಲಿರುವ ಇತರ ದೇವಾಲಯಗಳು ಅಪರೂಪಪದ ದೇವಾಲಯಗಳಾಗಿದ್ದು, ಇಲ್ಲಿ ದೇವತೆಗಳು ಪ್ರಕೃತಿಯ ಸೌಂದರ್ಯ ಮತ್ತು ಆನಂದದ ನಡುವೆ ಪೂಜಿಸಲ್ಪಡುತ್ತಾರೆ. ಜೌಗಡದಲ್ಲಿರುವ ಆಶೋಕನ ಶಿಲಾಶಾಸನಗಳು ಅಪಾರ ಪ್ರಮಾಣದ ಪ್ರವಾಸಿಗರನ್ನು ವರ್ಷಪೂರ್ತಿ ಆಕಷಿಸುತ್ತವೆ.

ಗಂಜಾಂ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯ?

ಅಕ್ಟೋಬರನಿಂದ ಫೆಬ್ರುವರಿ ತಿಂಗಳುಗಳು ಗಂಜಾಂ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯವಾಗಿದೆ. ಈ ಸಮಯದಲ್ಲಿ ಇಲ್ಲಿನ ಹವಾಮಾನವು ತಂಪು ಮತ್ತು ಆಹ್ಲಾದಕರವಾಗಿರುತ್ತದೆ.

ಗಂಜಾಂ ನಗರವನ್ನು ತಲುಪುವುದು ಹೇಗೆ?

ಗಂಜಾಂ ನಗರವು ಉತ್ತಮ ರೇಲ್ವೆ ಸಂಪರ್ಕವನ್ನು ಹೊಂದಿದೆ. ಇದಕ್ಕೆ ಹತ್ತಿರ ಇರುವ ರೇಲ್ವೆ ನಿಲ್ದಾಣ ಎಂದರೆ ಬೇಹ್ರಮಪುರ ರೇಲ್ವೆ ನಿಲ್ದಾಣ. ಗಂಜಾಂ ನಗರಕ್ಕೆ ಹತ್ತಿರ ಇರುವ ವಿಮಾನ ನಿಲ್ದಾಣ ಎಂದರೆ ಭುವನೇಶ್ವರ ವಿಮಾನ ನಿಲ್ದಾಣ. ಈ ಜಿಲ್ಲೆಯು ಎಲ್ಲ ರೀತಿಯ ಉತ್ತಮ ರಸ್ತೆಗಳನ್ನು ಹೊಂದಿದ್ದು ಅವು ಅಭಿವೃದ್ದಿಗೊಂಡಿದೆ. ಅಕ್ಟೋಬರನಿಂದ ಫೆಬ್ರುವರಿ ತಿಂಗಳುಗಳು ಗಂಜಾಂ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯವಾಗಿದೆ. ಈ ಸಮಯದಲ್ಲಿ ಇಲ್ಲಿನ ಹವಾಮಾನವು ತಂಪು ಮತ್ತು ಆಹ್ಲಾದಕರವಾಗಿರುತ್ತದೆ.

ಗಂಜಾಂ ಪ್ರಸಿದ್ಧವಾಗಿದೆ

ಗಂಜಾಂ ಹವಾಮಾನ

ಗಂಜಾಂ
33oC / 91oF
 • Partly cloudy
 • Wind: S 6 km/h

ಉತ್ತಮ ಸಮಯ ಗಂಜಾಂ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಗಂಜಾಂ

 • ರಸ್ತೆಯ ಮೂಲಕ
  ಗಂಜಾಂ ನಗರವು ರಾಜ್ಯ ಮತ್ತು ದೇಶದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು, ಆಕರ್ಷಕ ಪ್ರವಾಸಿ ತಾಣ ಎಂದು ಹೆಸರುವಾಸಿಯಾಗಿದೆ. ಆದ್ದರಿಂದ ಇಲ್ಲಿ ಉತ್ತಮ ರಸ್ತೆ ಸಾರಿಗೆ ಸೌಲಭ್ಯ ಸೇವೆ ಇದೆ. ಒಡಿಸ್ಸಾ ರಾಜ್ಯದ ಯಾವುದೇ ನಗರದಿಂದ ಗಂಜಾಂ ತಲುಪಲು ರಸ್ತೆ ಸಾರಿಗೆಯ ವ್ಯವಸ್ಥೆ ಇದೆ. ಒಡಿಸ್ಸಾ ರಾಜ್ಯ ರಸ್ತೆ ಸಾರಿಗೆಯು ರಾಜ್ಯದ ಇತರ ಭಾಗಗಳಿಂದ ಗಂಜಾಂ ಅನ್ನು ತಲುಪಲು ಉತ್ತಮ ರಸ್ತೆ ಸಾರಿಗೆಯ ಸೌಕರ್ಯವನ್ನು ಕಲ್ಪಿಸಿದೆ. ಇದರ ಹೊರತಾಗಿಯೂ ಗಂಜಾಂ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳನ್ನು ತಲುಪಲು ಖಾಸಗಿ ವಾಹನಗಳ ಮತ್ತು ಟ್ಯಾಕ್ಸಿಗಳ ಸೌಲಭ್ಯವಿದ್ದು, ಪ್ರವಾಸಿಗರು ಇವುಗಳನ್ನು ಬಳಸಿಕೊಳ್ಳಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಇದಕ್ಕೆ ಹತ್ತಿರವಿರುವ ವಿಮಾನ ನಿಲ್ದಾಣ ಎಂದರೆ ಬೇಹ್ರಮಪುರ ರೇಲ್ವೆ ನಿಲ್ದಾಣ. ಇದು ಗಂಜಾಂನಿಂದ ಕೇವಲ 1.8 ರಷ್ಟು ಕೀಲೊ ಮೀಟರ ದೂರದಲ್ಲಿದೆ. ಗಂಜಾಂ ಸಹ ತನ್ನದೇ ಹೆಸರಿನ ಒಂದು ರೇಲ್ವೆ ನಿಲ್ದಾಣವನ್ನು ಹೊಂದಿದ್ದರೂ ಸಹ ಅದು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ದೇಶದ ಇತರ ಭಾಗಗಳೊಂದಿಗೆ ಉತ್ತಮ ರೇಲ್ವೆ ಸಂಪರ್ಕ ಹೊಂದಿಲ್ಲ. ಆದರೆ ಗಂಜಾಂ ನಗರಕ್ಕೆ ಹತ್ತಿರವಾಗಿರುವ ಬೇಹ್ರಮಪುರ ರೇಲ್ವೆ ನಿಲ್ದಾಣವು ರಾಜ್ಯ ಮತ್ತು ದೇಶದ ಇತರ ಪ್ರಮುಖ ಭಾಗಗಳೊಂದಿಗೆ ಉತ್ತಮ ರೇಲ್ವೆ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಗಂಜಾಂ ನಗರಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಎಂದರೆ ಭುವನೇಶ್ವರದಲ್ಲಿರುವ ಬಿಜು ಪಟ್ನಾಯಕ ವಿಮಾನ ನಿಲ್ದಾಣ. ಇದು ಗಂಜಾಂ ನಿಂದ 163 ಕೀಲೊ ಮೀಟರ ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ದೇಶ ಮತ್ತು ವಿದೇಶದ ಇತರ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಗಂಜಾಂ ಹೊರಡಲು ಪ್ರವಾಸಿಗರು ರೇಲ್ವೆಯನ್ನು, ಇಲ್ಲವೇ ಸರಕಾರಿ ಸಾರಿಗೆ ಅಥವಾ ಖಾಸಗಿ ವಾಹನಗಳನ್ನು, ಟ್ಯಾಕ್ಸಿಗಳನ್ನು ಬಳಸಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Ganjam
  33 OC
  91 OF
  UV Index: 8
  Partly cloudy
 • Tomorrow
  Ganjam
  29 OC
  83 OF
  UV Index: 8
  Sunny
 • Day After
  Ganjam
  29 OC
  84 OF
  UV Index: 8
  Sunny