Search
  • Follow NativePlanet
Share
ಮುಖಪುಟ » ಸ್ಥಳಗಳು » ಗಂಜಾಂ » ಆಕರ್ಷಣೆಗಳು » ಗಿರಿಸೋಲಾ

ಗಿರಿಸೋಲಾ, ಗಂಜಾಂ

1

ಗಿರಿಸೋಲಾವು ಬೇಹ್ರಮಪುರದಿಂದ 38 ಕೀಲೊ ಮೀಟರ ದೂರದಲ್ಲಿದ್ದು, ಆಂಧ್ರಪ್ರದೇಶದಿಂದ ಒರಿಸ್ಸಾಕ್ಕೆ ಹೋಗುವ ಪ್ರವೇಶ ದ್ವಾರದಂತೆ ಕೆಲಸ ನಿರ್ವಹಿಸುತ್ತದೆ. ಈ ಸ್ಥಳವು ನಗರದ ಶಬ್ದ ಮಾಲಿನ್ಯ ಮತ್ತು ವಿಪರೀತ ಜನಜಂಗುಳಿಯಿಂದ ದೂರವಾಗಿದ್ದು ಏಕಾಂತಗವಾಗಿದೆ. ಆನರ ತಮ್ಮ ಆಯಾಸವನ್ನು ಪರಿಹರಿಸಿಕೊಳ್ಳಲು ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಲು ಇದು ಸೂಕ್ತ ಪರಿಸರವನ್ನು ಒದಗಿಸಿ ಕೊಡುತ್ತದೆ. ಇಲ್ಲಿ ಪ್ರವಾಸಿ ವಿಶ್ರಾಂತಿ ಗೃಹವನ್ನು ನಿರ್ಮಿಸಲಾಗಿದ್ದು, ಇದು ಆಯಾಸಗೊಂಡ ಪ್ರವಾಸಿಗರಿಗೆ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಸ್ಥಳ ಮತ್ತು ವಿಶ್ರಾಂತ ಸಮಯವನ್ನು ನೀಡುತ್ತದೆ.

ಗಿರಿಸೋಲಾದ ಸಮೀಪದಲ್ಲಿಯೇ ಪತಿ ಸೋನೆಪುರ ಕಡಲ ತೀರ ಮತ್ತು ಭೈರಬೀ ದೇವಸ್ಥಾನಗಳಿವೆ.  ಈ ಕಡಲ ತೀರವು ಸತತವಾಗಿ ಹರಿಯುವ ಬಹುದಾ  ನದಿಯೊಂದಿಗೆ ಸಮಾಗಮಗೊಳ್ಳುತ್ತದೆ ಅಲ್ಲದೇ ಸೋನೆಪುರ ಮುಖ್ಯ ಸ್ಥಳದಿಂದ ಸಮುದ್ರವು ವಿಭಜಿತಗೊಳ್ಳುತ್ತದೆ.

ಭೈರಭಿ ದೇವಸ್ಥಾನವು ಗಿರಿಸೋಲಾದಿಂದ 10 ಕೀಲೊ ಮೀಟರ ದೂರದಲ್ಲಿದೆ. ಇದು ಇಲ್ಲಿನ ಮೀನುಗಾರರ ಪ್ರಮುಖ ದೇವಸ್ಥಾನವಾಗಿದ್ದು ಅವರು ಸಮುದ್ರಕ್ಕೆ ಮೀನು ಹಿಡಿಯಲು ಹೋಗುವುದಕ್ಕಿಂತ ಮುಂಚೆ ಈ ದೇವಾಲಯದ ದೇವರು ಭೈರಬಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಈ ದೇವಾಲಯವನ್ನು ಶಕ್ತಿ ಪೀಠ ಎಂದು ನಂಬಲಾಗಿದ್ದು, ಈಗ ಇದು ಪವಿತ್ರ ಸ್ಥಳವಾಗಿ ಹೆಸರುವಾಸಿಯಾಗಿದೆ. ಗಿರಿಸೋಲಾವು ಏಕಾಂತ, ಪ್ರಶಾಂತ ಕಡಲ ತೀರ ಮತ್ತು ಪವಿತ್ರವಾದ ದೇವಾಲಯಗಳ ಕಾರಣದಿಂದಾಗಿ ನೋಡಲೇ ಬೇಕಾದ ಸೂಕ್ತ ಪ್ರವಾಸಿ ತಾಣಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed

Near by City