Search
  • Follow NativePlanet
Share
ಮುಖಪುಟ » ಸ್ಥಳಗಳು » ಗಂಜಾಂ » ಹವಾಮಾನ

ಗಂಜಾಂ ಹವಾಮಾನ

ಗಂಜಾಂ ನಲ್ಲಿ ದಿನವೀಡಿ ನಿರಂತರವಾಗಿ ಶೀತಲ ಅಲೆಗಳು ಬೀಸುತ್ತಲೇ ಇರುತ್ತವೆ. ಚಳಿಗಾಲದ ಅವಧಿಯು ಇಲ್ಲಿ ಮಾಂತ್ರಿಕ ವಾತಾವರಣವನ್ನು ನಿರ್ಮಿಸುತ್ತದೆ. ಇಲ್ಲಿನ ಎಲ್ಲ ಪ್ರವಾಸಿ ತಾಣಗಳು ಪ್ರವಾಸಿಗರು ಮತ್ತು ಪ್ರವಾಸಿ ಚಟುವಟಿಕೆಗಳಾದ ವಿಹಾರ ಮತ್ತು ದೃಶ್ಯವಿಕ್ಷಣೆಗಳಿಂದಾಗಿ ಹೆಚ್ಚು ಜನನಿಬಿಡಗೊಳ್ಳುತ್ತವೆ. ಸಾಮಾನ್ಯವಾಗಿ ಇಲ್ಲಿಗೆ ಭೇಟಿ ಕೊಡುವ ಜನರು ವಿಶಾಲವಾದ ಕಾಡುಗಳ ಮಧ್ಯೆ ಬಯಲು ಉರಿಯನ್ನು ಹಾಕಿ ದೇಹವನ್ನು ಬೆಚ್ಚಗೆ ಮಾಡಿಕೊಂಡು ಅಥವಾ ಗಂಜಾಂನ ವಿಶೇಷ ಕಡಲು ತೀರಗಳಲ್ಲಿ ಸೂರ್ಯ ಸ್ನಾನವನ್ನು ಮಾಡಿ ಆನಂದಿಸುತ್ತಾರೆ.

ಬೇಸಿಗೆಗಾಲ

ಗಂಜಾಂನಲ್ಲಿ ಬೇಸಿಗೆ ಕಾಲವು ಮಾರ್ಚನಿಂದ ಮೇ ತಿಂಗಳಿನವರೆಗೂ ಇರುತ್ತದೆ. ಆಗ ಇಲ್ಲಿನ ತಾಪಮಾನವು ಏರಿಕೆ ಕಂಡು ವಾತಾವರಣವು ಆದ್ರ್ರವಾಗಿರುತ್ತದೆ. ಮೇ ತಿಂಗಳು ಅತಿ ಹೆಚ್ಚು ಉಷ್ಣಾಂಶ ಇರುವ ತಿಂಗಳಾಗಿದೆ. ಗಂಜಾಂ ಕಡಲ ತೀರದ ಪ್ರದೇಶವಾದ್ದರಿಂದ ಬೇಸಿಗೆ ಅವಧಿಯಲ್ಲಿ ಇಲ್ಲಿ ಹೆಚ್ಚು ಆದ್ರ್ರತೆ ಕಂಡು ಬರುತ್ತದೆ. ಈ ಸಮಯದಲ್ಲಿ ಸುಡುತ್ತಿರುವ ಸೂರ್ಯನು ಇಲ್ಲಿಗೆ ಬರುವ ಜನರ ಮತ್ತು ಪ್ರವಾಸಿಗರ ಆಯಾಸ ಮತ್ತು ಆತಂಕಕ್ಕೆ ಕಾರಣನಾಗುತ್ತಾನೆ. ಆದ್ದರಿಂದ ಈ ಸಮಯದಲ್ಲಿ ಗಂಜಾಂ ಪ್ರವಾಸವನ್ನು ಕೈಗೊಳ್ಳುವುದು ಅಷ್ಟೊಂದು ಸೂಕ್ತವಲ್ಲ.

ಮಳೆಗಾಲ

ಇಲ್ಲಿ ಜೂನ ತಿಂಗಳ ಎರಡನೇ ವಾರದಲ್ಲಿ ನೈರುತ್ಯ ಮಳೆಯು ಆರಂಭವಾಗುತ್ತದೆ. ಇದು ಸೆಪ್ಟಂಬರನವರೆಗೂ ಇರುತ್ತದೆ. ಈ ಮಳೆಗಾಲದ ಆಗಮನದೊಂದಿಗೆ ಗಂಜಾಂನ ವಾತಾವರಣವು ಶೇಕಡ 70 ರಷ್ಟು ಮಳೆಗಾಲದೊಂದಿಗೆ ತುಂಬಾ ಆಹ್ಲಾದಕರವಾಗುತ್ತದೆ. ಇದು ಸುಡುವ ಸೂರ್ಯನ ಬಿಸಿಲ ಬೇಗೆಯಿಂದ ಸಾಕಷ್ಟು ಪರಿಹಾರ ಮತ್ತು ವಿರಾಮವನ್ನು ಕೊಡುತ್ತದೆ. ಆದರೆ ಈ ಸಮಯದಲ್ಲಿ ಆಗಾಗ ಬೀಳುವ ಮಳೆಯ ಕಾರಣಗಳಿಂದಾಗಿ ಈ ಸಮಯದಲ್ಲಿ ಗಂಜಾಂ ಪ್ರವಾಸವನ್ನು ಕೈಗೊಳ್ಳುವುದು ಅಷ್ಟೊಂದು ಯೋಗ್ಯವಲ್ಲ.

ಚಳಿಗಾಲ

ಅಕ್ಟೋಬರ ತಿಂಗಳ ಕೊನೆಯಲ್ಲಿ ಕಾಣಿಸುವ ನೈರುತ್ಯ ಮಾರುತವು ಸ್ವತಃ ಗಂಜಾಂನಲ್ಲಿ ಚಳಿಗಾಲ ಆಗಮನದ ಸೂಚನೆಯನ್ನು ನೀಡುತ್ತದೆ. ಡಿಸಂಬರದ ಅವಧಿಯಲ್ಲಿ ಇಲ್ಲಿನ ತಾಪಮಾನವು ಸುಮಾರು 10 ಡಿಗ್ರಿ ಸೆಲ್ಸಿಯಸ ಅಷ್ಟು ಇಳಿಕೆಯನ್ನು ಕಾಣುತ್ತದೆ. ಚಳಿಗಾಲವು ಫೆಬ್ರುವರಿ ತಿಂಗಳಿನವರೆಗೂ ಇದ್ದು, ವಾತಾವರಣವನ್ನು ಆಕರ್ಷಕ ಮತ್ತು ಆಹ್ಲಾದಕರವಾಗಿರುತ್ತದೆ. ಈ ಕಾರಣಗಳಿಂದಾಗಿ ಈ ಸಮಯದಲ್ಲಿ ಗಂಜಾಂ ಪ್ರವಾಸವನ್ನು ಕೈಗೊಳ್ಳುವುದು ಯೋಗ್ಯ.  ಚಳಿಗಾಲದಲ್ಲಿ ಅಸಂಖ್ಯಾತ ಪ್ರವಾಸಿಗರನ್ನು ಇಲ್ಲಿ ಕಾಣಬಹುದು.