ಕಾಬಿ ಲುಂಗ್ಸಾಕ್, ಗ್ಯಾಂಗ್ಟಾಕ್

ಗ್ಯಾಂಗ್ಟಾಕ್ ನಿಂದ 17 ಕಿ.ಮೀ ದೂರದಲ್ಲಿ ಉತ್ತರ ಸಿಕ್ಕಿಂ ರಾಷ್ಟ್ರೀಯ ಹೆದ್ದಾರಿ ಮೇಲಿರುವ ಕಾಬಿ ಲುಂಗ್ಸಾಕ್ ಒಂದು ಐತಿಹಾಸಿಕ ಮಹತ್ವವುಳ್ಳ ಪ್ರದೇಶ. ಇದೆ ಸ್ಥಳದಲ್ಲೆ ಲೆಪ್ಚಾಗಳ ಮುಖ್ಯಸ್ಥ ಟೆ-ಕುಂಗ್-ಟೆಕ್ ಮತ್ತು ಭೂತಿಯಾ ಮುಖ್ಯಸ್ಥ ಖೆ - ಬುಮ್ - ಸರ್ ಗಳ ಮಧ್ಯೆ ಐತಿಹಾಸಿಕ ಒಪ್ಪಂದವಾಗಿತ್ತು. ಈ ಒಪ್ಪಂದವನ್ನು "ಬ್ಲಡ್ ಆಂಡ್ ಬ್ರದರ್ಹುಡ್" ಅಥವಾ 'ರಕ್ತ ಮತ್ತು ಸಹೋದರತ್ವ' ಎಂದು ಕರೆಯಲಾಗಿದೆ.

ಅತ್ಯಂತ ಸರಳ ಜೀವನ ಶೈಲಿ ಹೊಂದಿರುವ ಲೆಪ್ಚಾಗಳು ಮೂಲತಃ ಸಿಕ್ಕಿಮಿನ ಬುಡಕಟ್ಟು ಜನಾಂಗದವರು. ಕೃಷಿ ಅವಲಂಬಿಗಳಾಗಿ ತಮ್ಮ ಜೀವನವನ್ನು ಸಾಗಿಸುತ್ತಿದ್ದವರು. ಅವರು ತಮ್ಮೊಳಗೆ ಒಬ್ಬನನ್ನು ಮುಖ್ಯಸ್ಥನನ್ನಾಗಿ ಮಾಡಿ ಅವನ ಆದೇಶದಂತೆ ನಡೆಯುತ್ತಿದ್ದವರು.

ಕಾಲಕ್ರಮೇಣ ಟಿಬೇಟಿಯನ್ನರು ಬಹು ಸಂಖ್ಯೆಯಲ್ಲಿ ಸಿಕ್ಕಿಮಿಗೆ ಆಗಮಿಸತೊಡಗಿದರು ಮತ್ತು ಲೆಪ್ಚಾಗಳ ವಶದಲ್ಲಿರದ ಭೂಮಿಗಳನ್ನು ಕಬಳಿಸತೊಡಗಿದರು. ಅಷ್ಟೆ ಅಲ್ಲ, ಹಲವು ಲೆಪ್ಚಾಗಳನ್ನು ಬೌದ್ಧ ಮತಕ್ಕೆ ಮತಾಂತರಿಸುವಲ್ಲಿಯೂ ಯಶಸ್ವಿಯಾದರು.

ಈ ರೀತಿಯಾಗಿ ಬೆಳೆಯುತ್ತಿರುವ ಬೆಳವಣಿಗೆಗಳು ಮುಂದೊಮ್ಮೆ ಎರಡೂ ಸಮುದಾಯದವರಿಗೆ ಅಹಿತಕರವಾಗಿ ಪರಿಣಮಿಸುವುದನ್ನು ಮನಗಂಡು ಎರಡೂ ಕೋಮಿನ ಮುಖ್ಯಸ್ಥರು ಈ ಮಹತ್ವಾವದ ಒಪ್ಪಂದವನ್ನು ತಮ್ಮೊಳಗೆ ಮಾಡಿಕೊಂಡರು.

ಈ ಸ್ಥಳವು, ದಟ್ಟವಾದ ಕಾಡು, ಭವ್ಯವಾದ ಜಲಪಾತ ಮತ್ತು ಐತಿಹಾಸಿಕ ಸ್ಥಳಗಳನ್ನು ಹೊತ್ತು ನಿಂತು ಪ್ರಕೃತಿ ವೈಭವದ ಸೌಂದರ್ಯವನ್ನು ಸಾರುತ್ತದೆ.

Please Wait while comments are loading...