ಎನ್ಕಿ ಧಾರ್ಮಿಕ ಕೇಂದ್ರ, ಗ್ಯಾಂಗ್ಟಾಕ್

ಮುಖಪುಟ » ಸ್ಥಳಗಳು » ಗ್ಯಾಂಗ್ಟಾಕ್ » ಆಕರ್ಷಣೆಗಳು » ಎನ್ಕಿ ಧಾರ್ಮಿಕ ಕೇಂದ್ರ

ಗ್ಯಾಂಗ್ಟಾಕ್ ನಲ್ಲಿರುವ ಎನ್ಕಿ ಧಾರ್ಮಿಕ ಕೇಂದ್ರ ಪವಿತ್ರ ಹಾಗೂ ಸುಂದರ ಆರಾಧನಾ ಸ್ಥಳ. 1909ರಲ್ಲಿ ಇದು ಸಿಕ್ಕಿಂನ ರಾಜಧಾನಿಯಲ್ಲಿ ಸ್ಥಾಪನೆಯಾಯಿತು. ಇದು ಗ್ಯಾಂಗ್ಟಾಕ್ ಮೇಲೆ ಒಂದು ಬೆಟ್ಟದಲ್ಲಿ ನಿರ್ಮಿಸಲಾಗಿದೆ. ಇಲ್ಲಿಂದ ಕಾಂಚನಜುಂಗಾವನ್ನು ನೋಡುವುದೇ ಅದ್ಭುತ ಅನುಭವ.

ಒಂದು ದಂತಕಥೆಯ ಪ್ರಕಾರ ಈ ಧರ್ಮ ಕೇಂದ್ರವು ವಜ್ತಯಾನ ಬೌದ್ಧಮತರ ನಿಂಗ್ಮಾಗೆ ಸೇರಲ್ಪಟ್ಟಿದ್ದು, ಲಾಮ ಡ್ರುಪಥೊಬ್ ಕಾರ್ಪೊ ಎಂಬ ಸನ್ಯಾಸಿಯೂ ಇಲ್ಲಿಗೆ ಅನುಗ್ರಹ ನೀಡಿದ್ದಾರೆ. ಕಾರ್ಪೊ ಅವರಿಗೆ ಹಾರುವ ತಾಂತ್ರಿಕ ವಿದ್ಯೆ ಗೊತ್ತಿತ್ತು. ಅವರು ದಕ್ಷಿಣ ಸಿಕ್ಕಿಂನಲ್ಲಿರುವ ಮಯೆನಮ್ ಬೆಟ್ಟದಿಂದ ಹಾರಿಬಂದು ಇಲ್ಲಿ ಧಾರ್ಮಿಕ ಕೇಂದ್ರ ಸ್ಥಾಪಿಸಿದ್ದಾರೆಂಬ ಪ್ರತೀತಿಯಿದೆ.

ಎನ್ಕಿ ಧಾರ್ಮಿಕ ಕೇಂದ್ರದ ಎಂದರೆ ಒಂಟಿ ಸನ್ಯಾಸಿಗಳು ಎಂದರ್ಥವಂತೆ. ಮತ್ತೊಂದು ದಂತಕಥೆಯ ಪ್ರಕಾರ ಈ ಪ್ರದೇಶದಲ್ಲಿ ಕಾಂಚನ್ಡ್ಜುಂಗಾ ಮತ್ತು ಯಬ್ಡೀನ್ ಎಂಬ ರಕ್ಷಿಸುವ ದೇವತೆಗಳ ಇರುವಿಕೆಯಿಂದ ಈ ಸ್ಥಳ ಪವಿತ್ರವಾಗಿದೆ. ಈ ಎಲ್ಲಾ ದಂತಕಥೆಗಳು ಅತ್ಯಂತ ಸುಂದರವಾದ ಆರಾಧನಾ ಸ್ಥಳದ ಬಗ್ಗೆ ಗ್ಯಾಂಗ್ಟಾಕ್  ಮತ್ತು ಇತರ ಭಾಗದ ಭಕ್ತರ ಮನಸ್ಸಿನಲ್ಲಿ ವಿಶೇಷವಾದ ಸ್ಥಾನವನ್ನು ಒದಗಿಸಿಕೊಟ್ಟಿದೆ. ಇಲ್ಲಿನ ಗೊಂಪಾದೊಳಗಿನ ದೇವತೆಗಳು ತಮ್ಮ ಬೇಡಿಕೆಯನ್ನು ಈಡೇರಿಸುತ್ತಾರೆಂಬ ನಂಬಿಕೆ ಭಕ್ತರಲ್ಲಿದೆ.

ಗೊಂಪಾ ಬಹಳ ಅಲಂಕೃತಗೊಂಡು ನಿರ್ಮಿಸಿದ ಮತ್ತು ಒಳಗೆ ಅನೇಕ ದೇವತೆಗಳ ಆಕರ್ಷಕ ದೇವತೆಗಳ ಚಿತ್ರಗಳನ್ನು ಹೊಂದಿದೆ. ಲೊಕಿ ಶರಿಯಾ, ಬುದ್ಧ ಮತ್ತು ಗುರು ಪದ್ಮಸಾಂಭವ್ ಇಲ್ಲಿ ಪೂಜಿಸಲ್ಪಡುವ ಪ್ರಮುಖ ದೇವರು. ಗೊಂಪಾದಲ್ಲಿ ಮುಖವಾಡವೊಂದು ಇದ್ದು, ಇದನ್ನು ವಾರ್ಷಿಕವಾಗಿ ನಡೆಯುವ ಜಾತ್ರೆಯ ವೇಳೆ ಬಳಸಲಾಗುತ್ತದೆ. 2006ರಲ್ಲಿ ಸಿಕ್ಕಿಂನಲ್ಲಿ ನಡೆದ ಭೂಕಂಪದಿಂದಾಗಿ ಈ ಧಾರ್ಮಿಕ ಕೇಂದ್ರಕ್ಕೆ ಬಹಳಷ್ಟು ಹಾನಿಯಾಗಿರುವುದು ದುರಾದೃಷ್ಟವೆನ್ನಬಹುದು.

ಧಾರ್ಮಿಕ ಕೇಂದ್ರದಲ್ಲಿ ಪ್ರತೀ ವರ್ಷ ಕೆಲವು ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ. ಡೆಟೊರ್ ಚಾಮ್/ಚಾಮ್ ಡ್ಯಾನ್ಸ್ ಫೆಸ್ಟಿವಲ್, ಸಿಂಘೆ ಚಾಮ್ ಮತ್ತು ಪಾಂಗ್ ಲಹಾಬಸೊಲ್ ಇವುಗಳಲ್ಲಿ ಪ್ರಮುಖವಾದದ್ದು.

Please Wait while comments are loading...