Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ಆಕರ್ಷಣೆಗಳು » ಸಂಘೂಲ

ಸಂಘೂಲ, ಫತೇಘರ್ ಸಾಹಿಬ್

4

ಸಂಘೂಲ ನಗರವು ಪುರಾತತ್ವ ವಸ್ತು ಸಂಗ್ರಹಾಲಯಕೆ ಪ್ರಸಿದ್ಧವಾಗಿದೆ. ಇದು ಸಿಂಧೂ ಕಣಿವೆಯ ನಾಗರಿಕತೆಯ ಅವಶೇಷಗಳನ್ನು ಹೊಂದಿದೆ. ಇದನ್ನು ಉಚ್ಚ ಪಿಂಡ ಸಂಘೂಲ ಎಂದು ಪ್ರಸಿದ್ದವಾಗಿದೆ. ಈ ವಸ್ತು ಸಂಗ್ರಾಹಲಯವು ಫತೇಘರ ಸಾಹಿಬನಗರದಿಂದ 18.9 ಕೀಲೋ ಮೀಟರ ದೂರದಲ್ಲಿದೆ. ರಸ್ತೆ ಸಾರಿಗೆಯ ಮೂಲಕ ಇಲ್ಲಿಗೆ ತಲುಪಲು ಸುಮಾರು 28 ನಿಮಿಷಗಳು ಬೇಕು. ಮಧ್ಯ ಏಷ್ಯಾದ ರಾಜರುಗಳಾದ ಮಿಹಿರಕುಲ ಮತ್ತು ತೋರಮಣರಿಗೆ ಸೇರಿದ ನಾಣ್ಯಗಳು ಮತ್ತು ಮೊಹರುಗಳನ್ನು ಇಲ್ಲಿ ಕಾಣಸಿಗುತ್ತವೆ.

1968 ರಲ್ಲಿ ಈ ಸ್ಥಳದಲ್ಲಿ ಭೌದ್ಧ ಸ್ತೂಪವೊಂದನ್ನು ಕಂಡು ಹಿಡಿಯಲಾಯಿತು. ಕ್ರಿ.ಶ ಒಂದು ಮತ್ತು ಎರಡನೇ ಶತಮಾನದ ಮಥುರಾ ಕಲಾಶಾಲೆಗೆ ಸೇರಿದ 117 ಅಮೂಲ್ಯ ಕಲ್ಲುಗಳ ರಚನೆಯನ್ನು ಈ ಸ್ಥಳದಿಂದ 1985 gಲ್ಲಿ ಉತ್ಖನನ ಮಾಡಲಾಯಿತು, ಸಂಘೂಲ ವಸ್ತು ಸಂಗ್ರಹಾಲಯವು ಹರಪ್ಪನ ನಾಗರಿಕತೆಗೆ ಸಂಬಂಧಿಸಿದ ಅನೇಕ ದಾಖಲೆ ಮತ್ತು ಅವಶೇಷಗಳನ್ನು ಸಹ ಹೊಂದಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಸುಮಾರು 15,000 ಕ್ಕಿಂತಲೂ ಹೆಚ್ಚು ಕಲಾಕೃತಿಗಳು ಇದ್ದು ಇವುಗಳು ಇತಿಹಾಸಕಾರರಿಗೆ ಮತ್ತು ಕಲಾಪ್ರಿಯರಿಗೆ ಹೆಚ್ಚು ಸಂತೋಷವನ್ನು ಉಂಟು ಮಾಡುತ್ತವೆ. ಇಲ್ಲಿಗೆ ಬರುವ ಮುಖ್ಯ ದಾರಿಯಲ್ಲಿಯೇ ಕ್ರಿ.ಶ 1 ಮತ್ತು 2 ನೇ ಶತಮಾನಕ್ಕೆ ಸೇರಿದ ಬೌದ್ಧ ಸ್ತೂಪ ಮತ್ತು ಧಾರ್ಮಿಕ ಸಂಕೀರ್ಣವನ್ನು ಕಾಣಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu