Search
 • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ಆಕರ್ಷಣೆಗಳು » ಗುರುದ್ವಾರ ಫತೇಘರ್ ಸಾಹಿಬ್

ಗುರುದ್ವಾರ ಫತೇಘರ್ ಸಾಹಿಬ್, ಫತೇಘರ್ ಸಾಹಿಬ್

3

ಸಿರಹಿಂದ ಮತ್ತು ಮೊರಿಂದ ನಗರದ ರಸ್ತೆಯ ಮಧ್ಯದಲ್ಲಿ ಗುರುದ್ವಾರ ಫತೇಘರ್ ಸಾಹಿಬ್ ಮಂದಿರವಿದೆ. ಇದು ಸಿಖ್ಖರಿಗೆ ಅತ್ಯಂತ ಪವಿತ್ರ ಧಾರ್ಮಿಕ ಸ್ಥಳವಾಗಿದೆ. ಸಿಖ್ಖ ಧರ್ಮ ಗುರುಗಳಾದ ಗುರು ಗೋವಿಂದ ಸಿಂಗರ ಪುತ್ರರಾದ ಸಾಹಿಬಝಾದ ಫತೇ ಸಿಂಗ ಮತ್ತು ಸಾಹಿಬಝಾದ ಝೋರವಂಗ ಸಿಂಗರನ್ನು ಸಿರಹಿಂದನ ಫೌಜದಾರನಾಗಿದ್ದ ವಾಜಿದ ಖಾನನ ಆದೇಶದ ಮೇರೆಗೆ ಜೀವಂತವಾಗಿ ಇಟ್ಟಿಗೆಗಳ ಗೂಡಿನಲ್ಲಿ ಹೂಳಲಾಯಿತು. ಅವರಿಬ್ಬರು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅವರ ಈ ತ್ಯಾಗವನ್ನು ಸ್ಮರಿಸಲು ಗುರುದ್ವಾರವನ್ನು ನಿರ್ಮಿಸಲಾಯಿತು. ಗುರುದ್ವಾರದ ಒಳ ಸಂಕೀರ್ಣವು ಅನೇಕ ಪ್ರಸಿದ್ಧ ವಿನ್ಯಾಸಗಳಿಗೆ ನೆಲೆಯಾಗಿದೆ. ಉದಾಹರಣೆಗೆ ಗುರುದ್ವಾರ ಭೋರಾ ಸಾಹಿಬ, ಗುರುದ್ವಾರ ಬುರ್ಜ ಮಾತ ಗುಜ್ರಿ, ಗುರುದ್ವಾರ ಸಾಹಿಬ ಗಂಜ್, ತೋದರ ಮಲ್ ಜೈನ ಹಾಲ್ ಮತ್ತು ಸರೋವರ.

ಇದರ ಪ್ರವೇಶ ದ್ವಾರವನ್ನು ಬಿಳಿ ಕಲ್ಲುಗಳಿಂದ ನಿರ್ಮಿತವಾಗಿದ್ದು, ಮುಂದೆ ಅಲ್ಲಿನ ದಾರಿಯುದ್ದಕ್ಕೂ ಅಮೃತ ಶಿಲೆಗಳೇ ಕಂಡು ಬರುತ್ತವೆ. ಗುರುದ್ವಾರದ ಪ್ರಮುಖ ಕಟ್ಟಡವು ವಿಶೇಷವಾಗಿ ಸಿಖ್ಖ ವಾಸ್ತು ಶಿಲ್ಪ ಶೈಲಿಯನ್ನು ಒಳಗೊಂಡಿದ್ದು ಅದು ಅಮೃತ ಶಿಲೆಗಳಿಂದ ಮತ್ತು ಚಿನ್ನದ ಗೋಪುರಗಳಿಂದ ರಚಿತವಾಗಿದೆ. ಇಲ್ಲಿ ಪ್ರಸಿದ್ಧ ವಾರ್ಷಿಕ ಹಬ್ಬವಾದ ಶಾಹೀದಿ ಜೋರ ಮೇಳವನ್ನು ಪ್ರತಿವರ್ಷ ಡಿಸಂಬರನಲ್ಲಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಿಖ ಧರ್ಮಕ್ಕಾಗಿ ತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಲಾಗುತ್ತದೆ. ಈ ಸ್ಥಳದ ಪ್ರಶಾಂತತೆ ಮತ್ತು ಶಾಂತಿಪರತೆ ಪ್ರವಾಸಿಗರಿಗೆ ಸಂತೋಷವನ್ನು ನೀಡುವುದರಲ್ಲಿ ಸಂಶಯವಿಲ್ಲ. ಮತ್ತು ಇದು ಪ್ರವಾಸಿಗರಿಗೆ ಒಂದು ನಿಜವಾದ ಐತಿಹಾಸಿಕ ಸ್ಥಳವನ್ನು ವೀಕ್ಷಿಸಲು ಅವಕಾಶವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
28 Oct,Thu
Return On
29 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 Oct,Thu
Check Out
29 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 Oct,Thu
Return On
29 Oct,Fri