ಗುರುದ್ವಾರ ಜ್ಯೋತಿ ಸ್ವರೂಪ ಇದು ಸಿರಹಿಂದ ಮತ್ತು ಚಂದಿಘರದ ದಾರಿಯ ಮಧ್ಯದಲ್ಲಿ ನೆಲೆಗೊಂಡಿದೆ. ಇದು ಫತೇಘರ ಸಾಹಿಬ ನಗರದಿಂದ ಕೇವಲ ಸುಮಾರು ಒಂದು ಕೀಲೊ ಮೀಟರ ದೂರದಲ್ಲಿದೆ. ಇಲ್ಲಿ ಗುರು ಗೋವಿಂದ ಸಿಂಗರ ತಾಯಿಯಾದ ಮಾತಾ ಗುಜ್ರಿ ಮತ್ತು ಗುರು ಗೋವಿಂದ ಸಿಂಗರ ಪುತ್ರರಾದ ಸಾಹಿಬಝಾದ ಫತೇ ಸಿಂಗ ಮತ್ತು ಸಾಹಿಬಝಾದ ಝೋರವಂಗ ಸಿಂಗರ ಸ್ಮರಣೆಗಾಗಿ ಅವರ ಗೋರಿಗಳನ್ನು ನಿರ್ಮಿಸಲಾಗಿದೆ.
ಸಿರಹಿಂದನ ಫೌಜದಾರನಾಗಿದ್ದ ವಾಜಿದ ಖಾನನ ಕ್ರೂರತೆಯ ಕಾರಣದಿಂದ ಯಾರು ಈ ಶವಗಳನ್ನು ಹೂಳಲು ಸ್ಥಳವನ್ನು ನೀಡಿರಲಿಲ್ಲ. ಆದರೆ ಗುರು ಗೋವಿಂದ ಸಿಂಗರ ಕಟ್ಟಾ ಅನುಯಾಯಿಯಾಗಿದ್ದ ತೋದರ ಮಲನು ಒಬ್ಬ ರೈತನಿಂದ ಒಂದು ಸಣ್ಣ ತುಂಡಿನ ಜಮೀನು ಖರೀದಿಸಿ ಇಲ್ಲಿ ಆ ಹುತಾತ್ಮರನ್ನು ಮಣ್ಣು ಮಾಡಿದನು. ಅಂದಿನಿಂದ ಇದು ಪ್ರಸಿದ್ಧ ಪವಿತ್ರ ಸ್ಥಳವಾಯಿತು ಎಂಬ ಒಂದು ನಂಬಿಕೆ ಇದೆ. ಅಮೃತ ಶಿಲೆಯ ವಿನ್ಯಾಸ ಮತ್ತು ಗೋಪುರಗಳು ಈ ಗುರುದ್ವಾರದ ಪ್ರಮುಖ ಆಕರ್ಷಣೆಗಳು.


Click it and Unblock the Notifications