ಚಿಕ್ಕ ಕಾಶ್ಮೀರವೆಂದೇ ಜನಪ್ರಿಯವಾದ ದೋಡಾ ಜಿಲ್ಲೆಯ ಭದೇರ್ವಾ, ಕಿಲ್ಲಾ ಮೊಹಲ್ಲಾದಿಂದ ಗುಪ್ತ ಗಂಗಾ ಮತ್ತು ಖಬ್ರಿಸ್ತಾನ್‌ನಿಂದ ಗಾಥಾದವರೆಗೆ ವಿಸ್ತರಿಸಿರುವ ಸುಂದರ ತಾಣ. ಬೆಟ್ಟಗುಡ್ಡಗಳ ನಗರ ಭದೇರ್ವಾ ಬಟೋಟೆಯಿಂದ 80 ಕಿ.ಮೀ. ದೂರದಲ್ಲಿದೆ. ವಾಸುಕಿ ನಾಗ ದೇವಸ್ಥಾನ, ಸುಬರ್‌ನಾಗ್ ದೇವಸ್ಥಾನ, ಶೀತ್ಲಾ ಮಾತಾ ದೇವಸ್ಥಾನ, ಗುಪ್ತ ಗಂಗಾ ದೇವಸ್ಥಾನ, ಥುಬು ನಾಗ ದೇವಸ್ಥಾನ, ನಾಗ್ನಿ ಮಾತಾ ದೇವಸ್ಥಾನ ಮತ್ತು ಅಲಲ್ಬಾನಿ ದೇವಸ್ಥಾನ ಗಳು ನಗರದ ಆಕರ್ಷಣೆಗಳು. ಹಿಂದೂಗಳ ಪವಿತ್ರ ಕೈಲಾಸಯಾತ್ರೆಗೂ ಭದೇರ್ವಾ ಪ್ರಸಿದ್ಧ. ಪ್ರೇಕ್ಷಣೀಯ ಸ್ಥಳಗಳಿಂದ ಆಕರ್ಷಿಸುವ ಭದೇರ್ವಾ ನಗರದಲ್ಲಿ ಪ್ರವಾಸಿಗರು ಪದ್ರಿ, ಸಿಯೊಜ್, ಜಂತ್ರನ್, ರೊಸಾರಿಯಾಗಳಲ್ಲಿ ಸಾಹಸ ಕಾರ್ಯಗಳನ್ನು ಕೈಗೊಳ್ಳಬಹುದು. ಇಲ್ಲಿರುವ ಜೈ, ಕೆಲಾರ್, ಬ್ಲೈಸಾ, ಚಿಂತಾ ಮತ್ತು ಚಿರಾಲ ಕಣಿವೆಗಳು ಚಾರಣಿಗರಿಗೆ ಸ್ವರ್ಗವೇ ಸರಿ.


Click it and Unblock the Notifications