Search
  • Follow NativePlanet
Share
ಮುಖಪುಟ » ಸ್ಥಳಗಳು » ದೋಡಾ » ಆಕರ್ಷಣೆಗಳು
  • 01ಭದೇರ್ವಾ

    ಭದೇರ್ವಾ

    ಚಿಕ್ಕ ಕಾಶ್ಮೀರವೆಂದೇ ಜನಪ್ರಿಯವಾದ ದೋಡಾ ಜಿಲ್ಲೆಯ ಭದೇರ್ವಾ, ಕಿಲ್ಲಾ ಮೊಹಲ್ಲಾದಿಂದ ಗುಪ್ತ ಗಂಗಾ ಮತ್ತು ಖಬ್ರಿಸ್ತಾನ್‌ನಿಂದ ಗಾಥಾದವರೆಗೆ ವಿಸ್ತರಿಸಿರುವ ಸುಂದರ ತಾಣ. ಬೆಟ್ಟಗುಡ್ಡಗಳ ನಗರ ಭದೇರ್ವಾ ಬಟೋಟೆಯಿಂದ 80 ಕಿ.ಮೀ. ದೂರದಲ್ಲಿದೆ. ವಾಸುಕಿ ನಾಗ ದೇವಸ್ಥಾನ, ಸುಬರ್‌ನಾಗ್ ದೇವಸ್ಥಾನ, ಶೀತ್ಲಾ ಮಾತಾ...

    + ಹೆಚ್ಚಿಗೆ ಓದಿ
  • 02ಚಪ್ರಾ ಗಿರಿ

    ಚಪ್ರಾ ಗಿರಿ

    5600 ಮೀ ಎತ್ತರದಲ್ಲಿರುವ ಚಪ್ರಾ ಗಿರಿ ದೋಡಾ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣಗಳಲ್ಲೊಂದು. ಬಜುಮ್ ನಾಲಾ ಎಂದೂ ಕರೆಯಲ್ಪಡುವ ಈ ಶೃಂಗವನ್ನು ಗಲಹರ್, ಚಿಶೋಟ್, ಕಿಶ್ತ್‌ವಾರ್ ಮತ್ತು ಅತೊಲಿ ಬೆಟ್ಟಗಳಿಂದ ಚಾರಣದ ಮೂಲಕ ತಲುಪಬಹುದು.

    + ಹೆಚ್ಚಿಗೆ ಓದಿ
  • 03ಮೇಳಾ ಪಟ್

    ಮೇಳಾ ಪಟ್

    ಖಾಖಲ್‌ನಲ್ಲಿ ಆಯೋಜಿಸಲಾಗುವ ಮೇಲಾ ಪಟ್, ಭದೇರ್ವಾದ ಅತ್ಯಂತ ಜನಪ್ರಿಯ ಉತ್ಸವ. 16 ನೇ ಶತಮಾನ ಮುಘಲ್ ಸಾಮ್ರಾಜ್ಯದ ಅಕ್ಬರ್ ಅಡಳಿತದಲ್ಲೂ ಖಾಖಲ್ ಮೇಳದ ಕುರಿತು ಉಲ್ಲೇಖವಿದೆ. ದೋಡಾ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಮೇಳಗಳಲ್ಲಿ ಈ ಮೇಳಕ್ಕೆ ಮಹತ್ವದ ಸ್ಥಾನವಿದ್ದು, ಮಧ್ಯಯುಗದಿಂದ ಆಚರಣೆಯಲ್ಲಿದೆ ಎಂದು ಹೇಳಲಾಗಿದೆ. 3...

    + ಹೆಚ್ಚಿಗೆ ಓದಿ
  • 04ಗುಪ್ತ ಗಂಗಾ ದೇವಸ್ಥಾನ

    ಗುಪ್ತ ಗಂಗಾ ದೇವಸ್ಥಾನ

    ಭದೇರ್ವಾದ ಗುಪ್ತ ಗಂಗಾ ದೇವಸ್ಥಾನ ಜಿಲ್ಲೆಯ ಜನಪ್ರಿಯ, ಐತಿಹಾಸಿಕ ಮಹತ್ವವುಳ್ಳ ತಾಣಗಳಲ್ಲೊಂದು. ಹಿಂದೂ ಪವಿತ್ರ ಗ್ರಂಥ ಮಹಾಭಾರತದ ಪ್ರಕಾರ, ಗಡೀಪಾರಾದ ಪಾಂಡು ರಾಜನ ಮಕ್ಕಳು ಕೆಲ ಕಾಲ ಇಲ್ಲಿ ತಂಗಿದ್ದರಂತೆ. ಇಲ್ಲಿನ ಕಲ್ಲುಬಂಡೆಯೊಂದರಲ್ಲಿ ಇಂದಿಗೂ ಪಾಂಡವರಲ್ಲೊಬ್ಬನಾದ ಭೀಮನ ಹೆಜ್ಜೆ ಗುರುತು ಕಾಣಸಿಗುತ್ತದೆ ಎಂಬುದು...

    + ಹೆಚ್ಚಿಗೆ ಓದಿ
  • 05ಸ್ವರನ್ ಬಾವ್ಲಿ

    ಸ್ವರನ್ ಬಾವ್ಲಿ

    ಸ್ವರ್ಣಬುಗ್ಗೆ ಎಂದೂ ಕರೆಯಲ್ಪಡುವ ಸ್ವರನ್ ಬಾವ್ಲಿ ಭದೇರ್ವಾ ನಗರದ ಆಶಾಪತಿ ಗಿರಿಯ ತಳದಲ್ಲಿದೆ. ಈ ಬುಗ್ಗೆ ಧಾರ್ಮಿಕ ಮಹತ್ವ ಹೊಂದಿದ್ದು, ಈ ನೀರಿನಲ್ಲಿ ಒಮ್ಮೆ ಮುಳುಗಿದರೆ ಪಾಪಗಳೆಲ್ಲಾ ಪರಿಹಾರವಾಗುತ್ತದೆ ಎಂಬುದು ಹಿಂದೂಗಳ ನಂಬಿಕೆ. ನವರಾತ್ರಿ ವೇಳೆ, ದೃಷ್ಟ ಶಕ್ತಿಯ ಮೆಲೆ ಶಿಷ್ಟ ಶಕ್ತಿಯು ಜಯಗಳಿಸಿದ್ದರ ಸಂಕೇತವಾಗಿ...

    + ಹೆಚ್ಚಿಗೆ ಓದಿ
  • 06ಶಂತನ್ ಡೆಹ್ರಾ

    ಶಂತನ್ ಡೆಹ್ರಾ

    ಶಂತನ್ ಡೆಹ್ರಾ, ವಾಸುಕಿ ನಾಗ್ ಎಂಬ ಆದಿವಾಸಿಯ ಸಹೋದರರಲ್ಲೊಬ್ಬರಾದ ಶಂತನ್ ನಾಗ್ ಎಂಬುವವರಿಗೆ ಮೀಸಲಾಗಿರುವ ಪುರಾತನ ದೇವಾಲಯ. ಭಾರತದ ಅತ್ಯಂತ ಪುರಾತನ ಆದಿವಾಸಿ ಜನಾಂಗದ ಎರಡನೇ ಮುಖಂಡನಾದ ವಾಸುಕಿಯ ಸಹೋದರನೇ ಶಂತನ್ ನಾಗ್. ಚಿಕ್ಕ ಪರ್ವತ ಪ್ರದೇಶದಲ್ಲಿರುವ ಈ ದೇವಾಲಯವು ತನ್ನ ಸುತ್ತಲೂ ಸುಗಂಧಭರಿತ ಮರಗಳನ್ನು ಹೊಂದಿದೆ....

    + ಹೆಚ್ಚಿಗೆ ಓದಿ
  • 07ಶೀತ್ಲಾ ಮಾತಾ ದೇವಸ್ಥಾನ

    ಶೀತ್ಲಾ ಮಾತಾ ದೇವಸ್ಥಾನ

    ಸಣ್ಣ ಪರ್ವತ ರೆಹೋಶ್ರಾದಲ್ಲಿರುವ, ಸಾಂಕ್ರಾಮಿಕ ರೋಗಗಳನ್ನು ನಿವಾರಿಸುವ ಅಧಿದೇವತೆ ಶೀತ್ಲಾ ದೇವಿಯ ದೇವಸ್ಥಾನವಿದು. ಶೀತ್ಲಾ ದೇವಿಯ ಪುರಾತನ ವಿಗ್ರಹವಿರುವ ಈ ದೇವಸ್ಥಾನಕ್ಕೆ ನೂರಾರು ಭಕ್ತರು ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಹಿಂದೂಗಳ ಹಬ್ಬ ನವರಾತ್ರಿಯ 8 ನೇಯ ದಿನದಂದು ಈ ಪ್ರದೇಶದಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯವನ್ನು...

    + ಹೆಚ್ಚಿಗೆ ಓದಿ
  • 08ಸುಬರ್‌ನಾಗ್ ದೇವಸ್ಥಾನ

    ಸುಬರ್‌ನಾಗ್ ದೇವಸ್ಥಾನ

    ಪುರಾತನ ದೇವಾಲಯ ಸುಬರ್‌ನಾಗ್, ಸುಬರ್‌ನಾಗ್ ಅಥವಾ ಹಿಂದೂಗಳ ಆರಾಧ್ಯದೈವ ಶೇಷನಾಗನ ಮತ್ತೊಂದು ರೂಪವೇ ಹೌದು. ಸುಬರ್ ಧರ್‌ನ ಅಸ್ತವ್ಯಸ್ತ ಹುಲ್ಲುಗಾವಲ ಮೇಲಿರುವ ಈ ದೇವಸ್ಥಾನದ ಬಾಗಿಲುಗಳು ಹಿಂದು ಕ್ಯಾಲೆಂಡರಿನ ವೈಶಾಖದಲ್ಲಿ ಪ್ರತಿ ವರ್ಷದ ಏಪ್ರಿಲ್‌ನ ಮೊದಲ ದಿನವಿಡೀ ತೆರೆದಿರುತ್ತವೆ....

    + ಹೆಚ್ಚಿಗೆ ಓದಿ
  • 09ಥುಬು ನಾಗ್ ದೇವಸ್ಥಾನ

    ಥುಬು ನಾಗ್ ದೇವಸ್ಥಾನ

    ಭದೇರ್ವಾ ಮತ್ತು ಚಿಂತಾ ಕಣಿವೆಯನ್ನು ಬೇರ್ಪಡಿಸುವ ಪರ್ವತ ಪ್ರದೇಶ ಹಾಗೂ ಭದೇರ್ವಾ-ಜೈ ರಸ್ತೆಯ ಮೇಲ್ಮೈ ಪ್ರದೇಶದಲ್ಲಿರುವ ಈ ಥುಬುನಾಗ್ ದೇವಸ್ಥಾನದ ವಿಶೇಷತೆಯೆಂದರೆ, ಗಂಡು ಸಂತಾನ ಬಯಸುವ ಪೋಷಕರು ಇಲ್ಲಿ ಪ್ರಾರ್ಥಿಸಿದರೆ ಅವರ ಆಸೆಯು ಈಡೇರುತ್ತದೆ ಎಂಬ ಗಾಢವಾದ ನಂಬಿಕೆ. ಪ್ರತಿ ವರ್ಷದ ಶರದೃತುವಿನಲ್ಲಿ ಕರಾಯ್‌ನಿಂದ...

    + ಹೆಚ್ಚಿಗೆ ಓದಿ
  • 10ವಾಸುಕಿ ನಾಗ್ ದೇವಸ್ಥಾನ

    ವಾಸುಕಿ ನಾಗ್ ದೇವಸ್ಥಾನ

    ವಾಸುಕಿ ನಾಗ್ ಭದೇರ್ವಾದ ಅತ್ಯಂತ ಪುರಾತನ ದೇವಾಲಯಗಳಲ್ಲೊಂದು. ಈ ದೇವಸ್ಥಾನದ ಐತಿಹ್ಯ 11 ನೇಯ ಶತಮಾನದ್ದು. ಸರ್ಪಕ್ಕೆ ಮತ್ತೊಂದು ಹೆಸರಾದ ವಾಸುಕಿ ಎಂಬ ಸಂಸ್ಕೃತ ಪದದಿಂದ ಈ ದೇವಸ್ಥಾನಕ್ಕೆ ವಾಸುಕಿ ನಾಗ್ ಎಂದು ಹೇಳಲಾಗಿದೆ. ಹಿಂದೂ ಪುರಾಣಗಳ ಪ್ರಕಾರ, ವಾಸುಕಿ ನಾಗದೇವತೆಗಳ ಅಧಿದೇವತೆಯಾಗಿದ್ದು, ಶಿರದಲ್ಲಿ ನಾಗಮಣಿ...

    + ಹೆಚ್ಚಿಗೆ ಓದಿ
  • 11ನಾಗ್ನಿ ಮಾತಾ ದೇವಸ್ಥಾನ

    ನಾಗ್ನಿ ಮಾತಾ ದೇವಸ್ಥಾನ

    ಥುಬು ನಾಗ್‌ನ ಸಹೋದರಿ ಎಂದು ಹೇಳಲಾಗುವ ನಾಗ್ನಿ ಮಾತಾ, ಸರ್ಪದೇವತೆಯರ ದೇವಸ್ಥಾಗಳಲ್ಲೊಂದು. ಹಿಂದೂ ಪುರಾಣಶಾಸ್ತ್ರದ ಪ್ರಕಾರ, ವೈಶಾಖ ಮಾಸದ ಮೊದಲ ದಿನ ಭಕ್ತರು ಬೃಹತ್ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಲಂಗರ್ ಅಥವಾ ಉಚಿತ ಅಡುಗೆಮನೆಯನ್ನು ಸಂಘಟಿಸಿ ಭಕ್ತರಿಗೆಲ್ಲಾ ಕುರಿಯನ್ನು ಬಲಿಕೊಟ್ಟು...

    + ಹೆಚ್ಚಿಗೆ ಓದಿ
  • 12ಅಲಲ್ಬಾನಿ ದೇವಸ್ಥಾನ

    ಅಲಲ್ಬಾನಿ ದೇವಸ್ಥಾನ

    ಭದೇರ್ವಾ ಪರ್ವತ ಪ್ರದೇಶದಲ್ಲಿರುವ ಪುರಾತನ ದೇವಾಲಯವೇ ಅಲಲ್ಬಾನಿ ದೇವಸ್ಥಾನ. ದೇವರನ್ನು ತಾಮ್ರದ ಸಂಗೀತ ಉಪಕರಣಗಳಿಂದ ಪ್ರಸನ್ನಗೊಳಿಸುವ ವಿಶಿಷ್ಟ ಆಚರಣೆಯಿಂದಲೇ ಈ ಪ್ರೇಕ್ಷಣೀಯ ಸ್ಥಳ ವಿಶಿಷ್ಟವೆನಿಸಿದೆ. ಕೃಷ್ಣನ ಜನ್ಮಾವತಾರವನ್ನು ಸಂಭ್ರಮಿಸುವ ಹಿಂದೂ ದೇವತೆಗಳ ಹಬ್ಬ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಶ್ರದ್ಧೆ,...

    + ಹೆಚ್ಚಿಗೆ ಓದಿ
  • 13ಚಿಂತಾ ಕಣಿವೆ

    ಚಿಂತಾ ಕಣಿವೆ

    ಭದೇರ್ವಾದ ದಟ್ಟ ಕೋನಿಫೆರಸ್ ಕಾಡಿನ ನಡುವೆ ಸಮುದ್ರಮಟ್ಟಕ್ಕಿಂತ 6500 ಅಡಿ ಎತ್ತರದಲ್ಲಿ ಚಿಂತಾ ಕಣಿವೆಯನ್ನು ಕಾಣಬಹುದು. ಚಿಂತಾ ನಾಲಾದಲ್ಲಿ ನೆಲೆಸಿರುವ ಥುಬಾ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಚಿಂತಾ ಕಣಿವೆ ಒಳಗೊಂಡಿದೆ. ಥುಬಾ ಕಣಿವೆ ಭದೇರ್ವಾ ಮತ್ತು ಚಿಂತಾ ಕಣಿವೆಯನ್ನು ಬೇರ್ಪಡಿಸುವ ಅತಿ ಎತ್ತರದ ಪ್ರದೇಶವೂ...

    + ಹೆಚ್ಚಿಗೆ ಓದಿ
  • 14ಸಿಯೊಜ್ ಹುಲ್ಲುಗಾವಲು

    ಸಿಯೊಜ್ ಹುಲ್ಲುಗಾವಲು

    ಭದೇರ್ವಾ ಮುಕುಟದ ವಜ್ರ ಎಂದೇ ಪ್ರಸಿದ್ಧಿ ಪಡೆದಿರುವ ಸಿಯೊಜ್ ಹುಲ್ಲುಗಾವಲು ಪ್ರದೇಶ ಕೈಲಾಶ ಕುಂಡದ ದಕ್ಷಿಣ ಭಾಗದಲ್ಲಿದೆ. ಸ್ಥಳೀಯವಾಗಿ, ಸಿಯೊಜ್ ಧರ್ ಎಂದು ಕರೆಯಲ್ಪಡುವ ಈ ಪ್ರದೇಶ ತನ್ನ ಸುತ್ತಲೂ ದಟ್ಟ ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರೆದಿದೆ. ಸಿಯೋಜ್ ನೀರಿನ ತೊರೆಯೊಂದು ಈ ಕಣಿವೆಯ ಮೂಲಕ ಹರಿದು ಉಧಮ್‌ಪುರ...

    + ಹೆಚ್ಚಿಗೆ ಓದಿ
  • 15ಪಡ್ರಿ

    ಪಡ್ರಿ

    ಭದೇರ್ವಾ ಜಿಲ್ಲೆಯಿಂದ 40 ಕಿ.ಮೀ ದೂರದಲ್ಲಿ, 10,500 ಅಡಿ ಎತ್ತರದಲ್ಲಿರುವ ಪ್ರದೇಶ ಪಡ್ರಿ ಗಲಿ. ಈ ಪ್ರದೇಶ ಸಾಮಾನ್ಯವಾಗಿ ಹಿಮದಿಂದ ಆವೃತವಾಗಿರುವುದರಿಂದ ಪ್ರವಾಸಸಿಗರ ಪಿಕ್‌ನಿಕ್ ತಾಣವೆನಿಸಿದೆ. ಪ್ರತಿವರ್ಷದ ಜುಲೈನಲ್ಲಿ ನಡೆಯುವ ಮಣಿ-ಮಹೇಶ್ ಯಾತ್ರೆಯಲ್ಲಿ ಭಕ್ತರು ಪಡ್ರಿ ಗಲಿ ಮೂಲಕ ಹಾದು ಹೋಗುತ್ತಾರೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat