Search
  • Follow NativePlanet
Share
ಮುಖಪುಟ » ಸ್ಥಳಗಳು » ದೋಡಾ » ಹವಾಮಾನ

ದೋಡಾ ಹವಾಮಾನ

ನವೆಂಬರ್-ಮಾರ್ಚ್ ನಡುವಿನ ಸಮಯ ದೋಡಾ ಭೇಟಿಗೆ ಸೂಕ್ತವೆಂದು ಹೇಳಲಾಗಿದೆ. ಜಿಲ್ಲೆಯ ನೈಸರ್ಗಿಕ ಸವಿಯನ್ನು ಪ್ರತ್ಯಕ್ಷವಾಗಿ ಅನುಭವಿಸಲು ಪ್ರವಾಸಿಗರು ಸೆಪ್ಟೆಂಬರ್-ನವೆಂಬರ್ ತಿಂಗಳಲ್ಲಿ ಪ್ರವಾಸ ಕೈಗೊಳ್ಳುವುದು ಒಳಿತು.

ಬೇಸಿಗೆಗಾಲ

(ಏಪ್ರಿಲ್-ಜೂನ್): ಈ ಋತುವಿನಲ್ಲಿ ದೋಡಾದ ಪ್ರಕೃತಿ ಆಹ್ಲಾದಕರವಾಗಿರುತ್ತದೆ. ಕನಿಷ್ಠ ತಾಪಮಾನ 18 ಡಿಗ್ರಿ ಮತ್ತು ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಶಿಯಸ್‌ನಷ್ಟಿರುತ್ತದೆ. ಚಾರಣ ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಈ ವಾತಾವರಣ ಸೂಕ್ತವಾಗಿರುತ್ತದೆ.

ಮಳೆಗಾಲ

(ಜುಲೈ-ಸೆಪ್ಟೆಂಬರ್): ದೋಡಾದ ಮಳೆಗಾಲ ಅತಿ ಕಡಿಮೆ ಮಳೆಯಿಂದ ಕೂಡಿರುತ್ತದೆ. ವಾತಾವರಣದಲ್ಲಿ ತೇವಾಂಶವಿದ್ದು, ರಾತ್ರಿಗಳು ಹೆಚ್ಚು ತಂಪಾಗಿರುತ್ತವೆ.

ಚಳಿಗಾಲ

(ನವೆಂಬರ್-ಫೆಬ್ರವರಿ): ಚಳಿಗಾಲದಲ್ಲಿ ದೋಡಾ ಪ್ರದೇಶ ತುಸು ತಣ್ಣಗಿರುತ್ತದೆ. ಈ ಸಮಯದಲ್ಲಿ ಜಿಲ್ಲೆಯಲ್ಲಿ ದಾಖಲಾದ ಅತಿ ಕಡಿಮೆ ಉಷ್ಣಾಂಶವೆಂದರೆ ಸಹಿಸಿಕೊಳ್ಳಬಹುದಾದ 4 ಡಿಗ್ರಿ ಸೆಲ್ಶಿಯಸ್‌ನಷ್ಟು. ಹಿಮಪಾತ ಹೆಚ್ಚುವುದರಿಂದ ಚಳಿಗಾಲದಲ್ಲಿ ಪ್ರದೇಶದಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇರುತ್ತದೆ.