Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಆಕರ್ಷಣೆಗಳು » ಸೈಥೆಕಿಮ ಹಳ್ಳಿ

ಸೈಥೆಕಿಮ ಹಳ್ಳಿ, ದಿಮಾಪುರ್

1

ಸೈಥೆಕಿಮ ಹಳ್ಳಿಯು ದಿಮಾಪುರ್ ನಗರದ ಹೊರವಲಯದಲ್ಲಿ ನೆಲೆಗೊಂಡಿದೆ. ಇದು ತನ್ನಲ್ಲಿ ನೆಲೆಗೊಂಡಿರುವ ತ್ರಿವಳಿ ಜಲಪಾತಕ್ಕೆ ಹೆಸರುವಾಸಿಯಾಗಿದೆ. ನಗರದ ಕೇಂದ್ರ ಭಾಗದಿಂದ ನಯನ ಮನೋಹರವಾದ ಪ್ರಾಕೃತಿಕ ಸೊಬಗಿನ ರಸ್ತೆಯಲ್ಲಿ ಒಂದು ಗಂಟೆ ಪ್ರಯಾಣಿಸಿದರೆ ನೀವು ಈ ಜಲಪಾತದ ಬಳಿಗೆ ತಲುಪಬಹುದು. ಈ ಜಲಪಾತದ ಹೆಸರೇ ಸೂಚಿಸುವಂತೆ,ಇಲ್ಲಿ ಮೂರು ಜಲಪಾತಗಳೂ ಸುಮಾರು 280 ಅಡಿ ಎತ್ತರದಿಂದ ಪ್ರಾಕೃತಿಕವಾಗಿ ನಿರ್ಮಾಣವಾಗಲ್ಪಟ್ಟಿರುವ ಕೊಳಕ್ಕೆ ಧುಮ್ಮಿಕ್ಕುತ್ತವೆ. ಇದು ಚಾರಣಿಗರಿಗೆ ಮತ್ತು ಸಾಹಸ ಮನೋಭಾವದವರಿಗೆ ಹೇಳಿ ಮಾಡಿಸಿದ ತಾಣವಾಗಿರುತ್ತದೆ. ಚಾರಣಿಗರು ಇಲ್ಲಿನ ಜಲಪಾತದಲ್ಲಿ ಚಳಿಗಾಲದ ಸಮಯದಲ್ಲಿ ಪರ್ವತಾರೋಹಣ ಸಹ ಮಾಡಬಹುದು. ಆಗ ಇಲ್ಲಿ ಕಡಿಮೆ ನೀರಿರುತ್ತದೆ.

ನಾಗಾಲ್ಯಾಂಡ್ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಇಲ್ಲಿ ಪ್ರವಾಸಿಗರಿಗಾಗಿ ಅಗತ್ಯವಾದ ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಮಾಡಿದೆ. ಸ್ವಲ್ಪ ಕಷ್ಟ ಪಟ್ಟು ನೀವು ಬೆಟ್ಟವನ್ನು ಏರಿದರೆ ದಿಮಾಪುರ್ ನಗರದ ಪಕ್ಷಿ ನೋಟವನ್ನು ಕಾಣಬಹುದು. ಇಲ್ಲಿ ಇಷ್ಟರಲ್ಲೆ ಒಂದು ರೆಸಾರ್ಟ್ ಸಹ ನಿರ್ಮಾಣಗೊಳ್ಳಲಿದೆ. ಆದರೆ ಇದು ಸಾಹಸ ಪ್ರಿಯರಿಗೆ ಹಾಗು ಚಾರಣ ಮಾಡಲು ಬರುವವರಿಗೆ ಅಂತಹ ಸಂತೋಷದ ಸಂಗತಿಯೇನಲ್ಲ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue