ದಿಮಾಪುರ್ ಬಳಿಯ ಪ್ರಾಚೀನವಾದ ಚುಮುಕೆಡಿಮ ಹಳ್ಳಿಯ ಸುತ್ತ-ಮುತ್ತ ಹಲವಾರು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತವೆ. ಇದು ಇಲ್ಲಿನ ನೋಡಲೆ ಬೇಕಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಡಿಮಪುರ ನಗರದಿಂದ 14 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಚುಮುಕೆಡಿಮ ಹಳ್ಳಿಯು ನಾಗಾ ಬೆಟ್ಟಗಳ ತಪ್ಪಲಿನಲ್ಲಿ ನೆಲೆಗೊಂಡಿದೆ. ಚುಮುಕೆಡಿಮವು ಹಿಂದಿನ ಕಾಲದಲ್ಲಿ ಅಂದರೆ 19ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ ಬ್ರಿಟೀಷರ ಅವಧಿಯಲ್ಲಿ ನಾಗಾ ಬೆಟ್ಟಗಳ ಪ್ರಪ್ರಥಮ ಆಡಳಿತ ಕೇಂದ್ರವಾಗಿತ್ತು.
ನಾಗಾಲ್ಯಾಂಡಿನ ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮದ ಅಭಿವೃದ್ಧಿಯ ಸಲುವಾಗಿ ಬೆಟ್ಟದ ಮೇಲೆ ಒಂದು ಪ್ರವಾಸಿ ಹಳ್ಳಿಯನ್ನು ನಿರ್ಮಾಣ ಮಾಡಿದೆ. ಇಲ್ಲಿಂದ ನಾವು ಸಂಪೂರ್ಣವಾದ ದಿಮಾಪುರ್ ಮತ್ತು ಪಕ್ಕದ ಕರ್ಬಿ-ಅಂಗ್‍ಲಾಂಗ್ ಜಿಲ್ಲೆಗಳ ನೋಟವನ್ನು ಸ್ಪಷ್ಟವಾಗಿ ಕಾಣಬಹುದು. ಇದು ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 8 ಕಿ.ಮೀ.ಗಳಷ್ಟು ದೂರದಲ್ಲಿದೆ.
ಸರ್ಕಾರವು ದಿಮಾಪುರ್- ಚುಮುಕೆಡಿಮ ನಗರವನ್ನು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿ ಗುರುತಿಸಿದೆ. ಈ ಸ್ಥಳವು ಇಪ್ಪತ್ತು ವರ್ಷದ ಹಿಂದೆ ಇದ್ದದ್ದಕ್ಕಿಂತಲು ಐದು ಪಟ್ಟು ಇಂದು ಬೆಳೆದಿರುವುದನ್ನು ನಾವು ಕಾಣಬಹುದು.


Click it and Unblock the Notifications