ಮೆಟ್ಟೂರ್ ತಮಿಳುನಾಡಿನ ಅತ್ಯಂತ ದೊಡ್ಡ ಅಣೆಕಟ್ಟುಗಳಲ್ಲಿ ಒಂದು. ಇದು ಧರ್ಮಪುರಿ ಜಿಲ್ಲೆಯಲ್ಲಿದೆ. ಇದನ್ನು ಕಾವೇರಿ ನದಿಗೆ ಅಡ್ಡವಾಗಿ ಕಟ್ಟಲಾಗಿದೆ. ಕಾವೇರಿಯು ತುಂಬಾ ವೇಗವಾಗಿ ಹರಿಯುವ ನದಿ. ಜಿಲ್ಲೆಯಾದ್ಯಂತ ವಿದ್ಯುತ್ ಪೂರೈಸುವ ಪ್ರಮುಖ ಮೂಲ ಇದೆಂದು ಹೇಳಲಾಗುತ್ತಿದೆ. ಈ ಅಣೆಕಟ್ಟು ಧಾರ್ಮಿಕವಾಗಿಯೂ ಪ್ರಸಿದ್ಧವಾಗಿರುವ ಮೆಟ್ಟೂರ್ ನಗರದಲ್ಲಿದೆ. ಇಲ್ಲಿಂದ ರಾಜ್ಯದ ಇತರ ಪ್ರದೇಶಗಳಿಗೆ ಬಸ್ ಹಾಗೂ ಟ್ಯಾಕ್ಸಿ ವ್ಯವಸ್ಥೆ ಇದೆ ಅದು ಕೂಡಾ ಕಡಿಮೆ ವೆಚ್ಚದಲ್ಲಿ. ಆಡಿ ಪೆರುಕ್ಕು ಇಲ್ಲಿ ವರ್ಷಂಪ್ರತಿ ನಡೆಯುವ ಪ್ರಮುಖ ಉತ್ಸವ. ಮೆಟ್ಟೂರ್ ಆಣೆಕಟ್ಟು ಸ್ಟಾನ್ಲೀ ಜಲಾಶಯ ಎಂದೂ ಕರೆಯಲ್ಪಡುತ್ತದೆ. ಈ ಜಲಾಶಯದಲ್ಲಿ ಎರಡು ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್ ಗಳಿವೆ.


Click it and Unblock the Notifications