Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಪುರಿ » ಹವಾಮಾನ

ಧರ್ಮಪುರಿ ಹವಾಮಾನ

ಧರ್ಮಪುರಿಗೆ ಭೇಟಿ ನೀಡಲು ಉತ್ತಮ ಸಮಯ ಚಳಿಗಾಲವಾಗಿದೆ. ಜುಲೈ ನ ಕೊನೆಗೆ ಇಲ್ಲಿ ಮಳೆ ಶುರುವಾಗುತ್ತದೆ. ಚಳಿಗಾಲದಲ್ಲಿ ಪ್ರಯಾಣ ಇಷ್ಟ ಪಡದವರು ಈ ಸಮಯದಲ್ಲಿ ಧರ್ಮಪುರಿಗೆ ಭೇಟಿ ನೀಡಬಹುದು.

ಬೇಸಿಗೆಗಾಲ

ಧರ್ಮಪುರಿಯಲ್ಲಿ ಬೇಸಿಗೆ ಕಾಲವು ತುಂಬಾ ಸೆಖೆಯಿಂದ ಕೂಡಿರುತ್ತದೆ. ಸಾಧಾರಣವಾಗಿ ಬೇಸಿಗೆಕಾಲವು ಏಪ್ರಿಲ್ ನಿಂದ ಜೂನ್ ತಿಂಗಳವರೆಗೆ ಇರುತ್ತದೆ. ಈ ಸಮಯದಲ್ಲಿನ ಕನಿಷ್ಠ ಹಾಗೂ ಗರಿಷ್ಟ ಉಷ್ಣತೆಯು ಸುಮಾರು 32ಹಾಗೂ 38 ಡಿಗ್ರಿ ಸೆಲ್ಶಿಯುಸ್ ಆಗಿರುತ್ತದೆ.

ಮಳೆಗಾಲ

ಧರ್ಮಪುರಿಯಲ್ಲಿ ಮಳೆಗಾಲವು ಜುಲೈ ನಲ್ಲಿ ಶುರುವಾಗಿ ಅಕ್ಟೋಬರ್ ಕೊನೆಯ ತನಕ ಮುಂದುವರಿಯುತ್ತದೆ. ಈ ಸಮಯದಲ್ಲಿ ಮಿತವಾದ ಉಷ್ಣತೆ ಹಾಗೂ ಹದವಾದ ಮಳೆ ಇರುತ್ತದೆ. ಈ ಪ್ರದೇಶದಲ್ಲಿ ಭಾರಿ ಮಳೆಯ ಸಂಭವ ಕಡಿಮೆಯಾದ ಕಾರಣ ಮಳೆಗಾಲದಲ್ಲೂ ಇಲ್ಲಿಗೆ ತೆರಳಬಹುದು.

ಚಳಿಗಾಲ

ಧರ್ಮಪುರಿಯಲ್ಲಿ ಚಳಿಗಾಲವು ನವೆಂಬರ್ ನಲ್ಲಿ ಶುರುವಾಗಿ ಫೆಬ್ರವರಿ ಕೊನೆಯ ತನಕ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಕನಿಷ್ಠ ಉಷ್ಣತೆ ಸುಮಾರು 18 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಟ ಉಷ್ಣತೆಯು ಸುಮಾರು 25 ಡಿಗ್ರಿ ಆಗುತ್ತದೆ.