ರಾವಿ ನದಿಗೆ ನಿರ್ಮಿಸಲಾದ ಅಣೆಕಟ್ಟು ಚಮೇರಾ ಡ್ಯಾಂ. ಇದು ಇಂದು ರಾಜ್ಯದ ಜೀವನಾಧಾರವಾಗಿದೆ. ಡಾಲಹೌಸಿಯಿಂದ 35 ಕಿ.ಮೀ. ದೂರದಲ್ಲಿದೆ. ಹೈಡ್ರೊ ವಿದ್ಯುತ್ ಉತ್ಪಾದನೆಗೆ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಈ ಆಣೆಕಟ್ಟಿನ ಭಾಗದಲ್ಲಿ ನಿರ್ಮಾಣವಾಗಿರುವ ಸರೋವರವೊಂದಿದ್ದು ಇದರ ವಿಶೇಷತೆ ಅಂದರೆ ವಾತಾವರಣದ ತಾಪಮಾನವನ್ನು ಬದಲಿಸುವ ಶಕ್ತಿ ಹೊಂದಿದೆ. ಇದೇ ಸರೋವರದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಜಲಕ್ರೀಡಾ ಚಟುವಟಿಕೆಗೆ ಇದು ಹೇಳಿ ಮಾಡಿಸಿದ ತಾಣ. ರೋವಿಂಗ್, ಪೆಡಲ್ ಬೋಟಿಂಗ್, ಮೋಟಾರ್ ಬೋಟಿಂಗ್, ಸೇಲಿಂಗ್, ಕೆನೋಯಿಂಗ್, ಆಂಗಲಿಂಗ್ ಹಾಗೂ ಕಾಯ್ಕಿಂಗ್‌ಗೆ ಸೂಕ್ತವಾಗಿದೆ. ಇದೆಲ್ಲದರ ಜತೆ ಹಿಮಾಚಲ ಪ್ರದೇಶ ಸರ್ಕಾರ ಕೂಡ ಹೌಸ್ ಬೋಟ್ ಸೌಲಭ್ಯ, ಶಿಖಾರಿಯನ್ನು ನೀಡಿದೆ.


Click it and Unblock the Notifications