ಮಹಾನದಿಯ ಬಲಭಾಗದ ತಟದಲ್ಲಿ ಬಂಕಿ ನೆಲೆಗೊಂಡಿದೆ. ಇದು ಕಟಕ್ ನಿಂದ 52 ಕಿ.ಮೀ. ದೂರದಲ್ಲಿದೆ. ದೇವಿ ಚರ್ಚಿಕಾ ಮಂದಿರದಿಂದಾಗಿ ಈ ಸ್ಥಳ ಪ್ರಸಿದ್ಧಿ ಹೊಂದಿದೆ. ರುಚಿಕ್ ಪರ್ವತ ಎಂಬ ಸಣ್ಣ ಬೆಟ್ಟದ ಮೇಲೆ ಈ ಮಂದಿರ ಉಪಸ್ಥಿತವಿದ್ದು, ಭಕ್ತಾದಿಗಳು ಪೂಜ್ಯಭಾವದಿಂದ ಇಲ್ಲಿದೆ ಬರುತ್ತಾರೆ. ಒರಿಸ್ಸಾದ ಪುರಾತದ ಶಕ್ತಿಪೀಠಗಳಲ್ಲಿ ಒಂದು ಎಂದು ಚರ್ಚಿಕಾ ಗುಡಿ ಹೆಸರು ಪಡೆದಿದೆ. ಅಷ್ಟ ಕೈಗಳನ್ನು ಹೊಂದಿರುವ ಚಾಮುಂಡಿ ದೇವಿ ಈ ಮಂದಿರದ ಆದಿ ದೇವತೆ. ಇಲ್ಲಿನ ಜನರು ದೇವಿಯನ್ನು ಮಾ ಚರ್ಚಿಕಾ ದೇವಿ ಎಂತಲೂ ಕರೆಯುತ್ತಾರೆ. ದೇವಿಯ ವೈಶಿಷ್ಟ್ಯವೆಂದರೆ, ಪರಾಜಿತವಾಗಿದ್ದ ಶರೀರದ ಮೇಲೆ ಕುಳಿತು ಮನುಷ್ಯರ ತಲೆಬುರುಡೆಗಳ ಹಾರವನ್ನು ಹಾಕಿಕೊಂಡಿದ್ದಾಳೆ. ವರ್ಷವಿಡೀ ಭಕ್ತರು ದೂರದೂರದಿಂದ ಇಲ್ಲಿಗೆ ಭೇಟಿ ಕೊಡುತ್ತಾರೆ. ನಿಯಮಿತವಾದ ಬಸ್ ವ್ಯವಸ್ಥೆ ಮತ್ತು ಬುಕ್ಕಿಂಗ್ ವ್ಯವಸ್ಥೆ ಇಲ್ಲಿದೆ.


Click it and Unblock the Notifications