Search
  • Follow NativePlanet
Share
ಮುಖಪುಟ » ಸ್ಥಳಗಳು » ಕಟಕ್ » ಆಕರ್ಷಣೆಗಳು » ಬಾರಾಬತಿ ಸ್ಟೇಡಿಯಂ

ಬಾರಾಬತಿ ಸ್ಟೇಡಿಯಂ, ಕಟಕ್

2

ಕಟಕ್ ನಗರದಲ್ಲಿರುವ ಈ ಬಾರಾಬತಿ ಸ್ಟೇಡಿಯಂ ಒರಿಸ್ಸಾದ ಕ್ರಿಕೆಟ್ ತಂಡದ ಆಟಗಾರರಿಗೆ ನಿತ್ಯ ಅಭ್ಯಾಸದ ತಾಣವಾಗಿದೆ. ಇದನ್ನು ಒರಿಸ್ಸಾ ಕ್ರಿಕೆಟ್ ಅಸೋಸಿಯೇಷನ್ ನಿರ್ವಹಿಸಿಕೊಂಡು ಬರುತ್ತಿದೆ. ಭಾರತದ ಹಳೆಯ ಸ್ಟೇಡಿಯಂಗಳ ಪೈಕಿ ಇದೂ ಒಂದಾಗಿದೆ.

ಪ್ರವಾಸಿ ತಂಡಗಳಾದ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮುಂತಾದ ತಂಡಗಳ ಕ್ರಿಕೆಟ್ ಆಟವನ್ನು ಈ ಸ್ಟೇಡಿಯಂ ಕಂಡಿದೆ. ರಾತ್ರಿವೇಳೆ ಕೂಡ ಹೊನಲು ಬೆಳಕಿನಲ್ಲಿ ಆಟವಾಡಲು ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಹಲವಾರು ಟೆಸ್ಟ್ ಪಂದ್ಯಗಳನ್ನು ಆಡಲಾಗಿದ್ದರೂ, ಹೆಚ್ಚಾಗಿ ಏಕದಿವಸೀಯ ಪಂದ್ಯಗಳಿಗೆ ಮೀಸಲಿಡಲಾಗಿದೆ. ಹಲವಾರು ಫುಟ್ ಬಾಲ್ ಪಂದ್ಯಾವಳಿಗಳಿಗೆ ಕೂಡ ಈ ಸ್ಟೇಡಿಯಂ ಸಾಕ್ಷಿಯಾಗಿದೆ.

ಭಾರತೀಯ ಕ್ರಿಕೆಟ್ ಕ್ಷೇತ್ರದ ಸುಪ್ರಸಿದ್ಧ ಆಟಗಾರರಾದ ಕಪಿಲ್ ದೇವ್ ತನ್ನ 300ನೇ ವಿಕೆಟನ್ನು ಪಡೆದುಕೊಂಡಿದ್ದು ಇದೇ ಸ್ಟೇಡಿಯಂನಲ್ಲಿ. ಅವರು ಶ್ರೀಲಂಕಾ ತಂಡ ರತ್ನಾಯಕೆಯ ವಿಕೆಟ್ ಉರುಳಿಸಿದ್ದರು. ಈ ಸ್ಟೇಡಿಯಂನ ಮತ್ತೊಂದು ವಿಶೇಷ ಅಂಶವೆಂದರೆ, ದಿಲೀಪ್ ವೆಂಗಸರ್ಕಾರ್ ಅವರು ಟೆಸ್ಟ್ ಜೀವನದ ಅತಿಹೆಚ್ಚು 166 ರನ್ ಗಳನ್ನು ಶ್ರೀಲಂಕಾದ ವಿರುದ್ಧ ಗಳಿಸಿದ್ದು ಇಲ್ಲಿಯೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri