Search
  • Follow NativePlanet
Share
ಮುಖಪುಟ » ಸ್ಥಳಗಳು » ಕಟಕ್ » ಹವಾಮಾನ

ಕಟಕ್ ಹವಾಮಾನ

ಕಟಕ್ ಪ್ರವಾಸ ಕೈಗೊಳ್ಳಲು ಚಳಿಗಾಲವೇ ಸೂಕ್ತ. ಇದರ ಅವಧಿ ಸೆಪ್ಟೆಂಬರ್ ನಿಂದ ಮಾರ್ಚ್ ವರೆಗೆ ಇರುತ್ತದೆ. ಈ ಸಮಯದಲ್ಲಿ ವಾತಾವರಣ ಹಿತಕರವಾಗಿರುತ್ತದೆ. ಉಷ್ಣಾಂಶವು 15 ಡಿಗ್ರಿಯಿಂದ 20 ಡಿಗ್ರಿವರೆಗೆ ಇರುತ್ತದೆ. ಹಾಗಾಗಿ ಕಟಕ್ ಪ್ರವಾಸ ಕೈಗೊಳ್ಳಲು ಇದೇ ಬೆಸ್ಟ್ ಟೈಮ್.

ಬೇಸಿಗೆಗಾಲ

ಕಟಕ್ ನಲ್ಲಿ ಬೇಸಿಗೆ ಕಾಲದಲ್ಲಿ ಉಷ್ಣಾಂಶ ಹೆಚ್ಚಿದ್ದು, ಸುಡು ಬಿಸಿಲಿರುತ್ತದೆ. ಮಾರ್ಚ್ ನಿಂದ ಶುರುವಾದ ಬೇಸಿಗೆ ಏಪ್ರಿಲ್, ಮೇ ತಿಂಗಳಲ್ಲಿ ವಿಪರೀತವಾಗಿರುತ್ತದೆ. ಉಷ್ಣಾಂಶ 40 ಡಿಗ್ರಿವರೆಗೆ ಏರುತ್ತದೆ. ಹೀಗಾಗಿ ಪ್ರವಾಸಿಗರು ಬೇಸಿಗೆಯಲ್ಲಿ ಪ್ರವಾಸ ಕೈಗೊಳ್ಳುವುದು ಸೂಕ್ತ ಅಲ್ಲವೇ ಅಲ್ಲ.

ಮಳೆಗಾಲ

ಕಟಕ್ ನಲ್ಲಿ ಮುಂಗಾರು ಜೂನ್ ನಿಂದ ಶುರುವಾಗಿ ಆಗಸ್ಟ್ ವರೆಗೆ ಇರುತ್ತದೆ. ಬೇಸಿಗೆಯ ಬೇಗೆಯಿಂದ ಬಳಲಿದ ಜನರಿಗೆ ಮಳೆಗಾಲ ಹಾಯ್ ಎನಿಸುತ್ತದೆ. ಉಷ್ಣಾಂಶ 33 ಡಿಗ್ರಿವರೆಗೆ ಇರುತ್ತದೆ.

ಚಳಿಗಾಲ

ಕಟಕ್ ನಲ್ಲಿ ಹಿತಕರವಾದ ವಾತಾವರಣ ಚಳಿಗಾಲದಲ್ಲಿ ಮಾತ್ರ ಇರುತ್ತದೆ. ಚಳಿಗಾಲ ಡಿಸೆಂಬರ್ ನಲ್ಲಿ ಶುರುವಾಗಿ ಫೆಬ್ರವರಿ ತಿಂಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಮರ್ಕ್ಯುರಿ ಇಳಿಮುಖವಾಗಿ 15 ಡಿಗ್ರಿವರೆಗೆ ಇರುತ್ತದೆ. ತಂಪಾದ ಗಾಳಿ ಬೀಸುತ್ತಿರುತ್ತದೆ. ಕಟಕ್ ಪ್ರವಾಸಕ್ಕೆ ಇದುವೇ ಸೂಕ್ತವಾದ ಕಾಲ.