ವಿಜಯ ಸ್ತಂಭ ಅಥವಾ ವಿಕ್ಟರಿ ಟವರ್, ಚಿತ್ತೋರಗಢದ ಪ್ರಮುಖ ಪ್ರವಾಸಿ ತಾಣ. ರಾಜ ಮಹಾರಾಣ ಕುಂಭ, ಈ ಗೋಪುರವನ್ನು 1440 ರಲ್ಲಿ ಕಟ್ಟಿಸಿದ. ಈ ಕಲಾತ್ಮಕ ರಚನೆಯು ಮಹಮ್ಮದ್ ಖಿಲ್ಜಿಯ ಮೇಲಿನ ವಿಜಯದಿಂದ ಪ್ರೇರಿತವಾಗಿ, ನೆನಪಿಗೆ ಕಟ್ಟಿದ್ದು. ಈ ಸ್ತಂಭವು 37 ಮೀಟರು ಎತ್ತರವಾಗಿದೆ ಮತ್ತು 9 ಮಹಡಿಯನ್ನು ಹೊಂದಿದೆ. ಸ್ತಂಭದ ಗೋಡೆಯ ಮೇಲೆಲ್ಲಾ ಹಿಂದೂ ದೇವರ ಚಿತ್ರಣವಿದೆ. ಹಿಂದೂ ಪುರಾಣಗಳಾದ ರಾಮಾಯಣ ಮತ್ತು ಮಹಾಭಾರತದ ಆಕರ್ಷಕ ಕಥೆಗಳನ್ನು ಈ ಗೋಡೆಗಳ ಮೇಲೆ ಕೆತ್ತಲಾಗಿದೆ. ಸ್ತಂಭದ ಮೇಲಿನಿಂದ ನಗರದ ಸುಂದರ ನೋಟವನ್ನು ಕಣ್ತುಂಬಿಕೊಳ್ಳಬಹುದು.


Click it and Unblock the Notifications