Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿತ್ತೋರಗಢ » ಹವಾಮಾನ

ಚಿತ್ತೋರಗಢ ಹವಾಮಾನ

ಚಿತ್ತೋರಗಢಕ್ಕೆ ಪ್ರಯಾಣ ಮಾಡುವ ಸೂಕ್ತ ಸಮಯವೆಂದರೆ ಅಕ್ಟೋಬರಿನಿಂದ ಮಾರ್ಚಿನ ಅವಧಿ. ಈ ಸಂದರ್ಭದಲ್ಲಿ ಇಲ್ಲಿನ ವಾತಾವರಣವು ಪ್ರಯಾಣಕ್ಕೆ ಸೂಕ್ತವಾಗಿದೆ.

ಬೇಸಿಗೆಗಾಲ

(ಮಾರ್ಚ್‌ನಿಂದ ಮೇ): ಚಿತ್ತೋರಗಢದಲ್ಲಿ ಬೇಸಿಗೆಕಾಲ ಆರಂಭವಾಗುವುದು ಮಾರ್ಚ್‌ನಲ್ಲಿ, ಅಂತ್ಯವಾಗುವುದು ಮೇನಲ್ಲಿ. ಈ ಅವಧಿಯಲ್ಲಿ ಅತ್ಯಂತ ಉಷ್ಣತೆಯನ್ನು ಇಲ್ಲಿನ ವಾತಾವರಣ ಹೊಂದಿರುತ್ತದೆ. ತಾಪಮಾನವು ಗರಿಷ್ಟ 44 ಡಿಗ್ರಿ ಮತ್ತು ಕನಿಷ್ಟ ತಾಪಮಾನವು 23 ಡಿಗ್ರಿ ಇರುತ್ತದೆ. ಅತ್ಯಂತ ಒಣ ಹವೆ ಮತ್ತು ಉಷ್ಣ ವಾತಾವಾರಣದಿಂದಾಗಿ ಈ ಅವಧಿಯಲ್ಲಿ ಪ್ರವಾಸಿಗರು ಭೇಟಿ ಮಾಡುವುದು ಸೂಕ್ತವಲ್ಲ.

ಮಳೆಗಾಲ

(ಜೂನ್‌ನಿಂದ ಸಪ್ಟೆಂಬರ್): ಬೇಸಿಗೆಕಾಲದ ಉಷ್ಣತೆಯಿಂದ ನೆಮ್ಮದಿ ನೀಡುವಂತೆ ಮಳೆಗಾಲವು ಮಧ್ಯಮ ಪ್ರಮಾಣದ ಮಳೆಯನ್ನು ಸುರಿಸುತ್ತದೆ. ಈ ಪ್ರದೇಶವು ಸುಮಾರು 60 ರಿಮದ 80 ಸೆಂ.ಮೀ ಮಳೆಯನ್ನು ಕಾಣುತ್ತದೆ.

ಚಳಿಗಾಲ

(ಡಿಸೆಂಬರಿನಿಂದ ಫೆಬ್ರುವರಿ): ಚಿತ್ತೋರಗಢದ ಚಳಿಗಾಲವು ಪ್ರಶಾಂತವಾಗಿರುತ್ತದೆ. ಈ ಸಮಯದಲ್ಲಿ ತಾಪಮಾನವು ಸಾಮಾನ್ಯವಾಗಿ 11 ಡಿಗ್ರಿಯಿಂದ 28 ಡಿಗ್ರಿ ಇರುತ್ತದೆ.