ಪಾಂಚ್ ಬೊಲ್ ಪಾಯಿಂಟ್ ಆಕರ್ಷಣೀಯವಾಗಿದ್ದು ಚಿಕಲ್ದಾರಾದಿಂದ 4 ಕೀ.ಮಿ ದೂರದಲ್ಲಿರುವ ಬೀರ್ ಲೇಕ್/ಸರೋವರದ ಬಳಿ ಕಾಣಬಹುದು. ಇದರ ಸುತ್ತಮುತ್ತಲಿನ ದೃಶ್ಯಗಳು ಮನಮೋಹಕವಾಗಿದೆ. ಇದರ ಒಂದು ಬದಿಯಲ್ಲಿ ಕಾಫಿ ನಡುತೋಪುಗಳನ್ನು ಕಾಣಬಹುದು. ಹಾಗೆಯೆ ಇನ್ನೊಂದು ಬದಿಯಲ್ಲಿ ಐದು ಬೆಟ್ಟಗಳಿಂದ ಸೃಷ್ಟಿಯಾಗಿರುವ ಒಂದು ದೊಡ್ಡ ಕಣಿವೆಯನ್ನು ಕಾಣಬಹದು.
ಪಾಂಚ್ ಬೊಲ್ ಪಾಯಿಂಟ್ ಈ ಹೆಸರನ್ನು ಪಡೇಯಲು ಕಾರಣವೇನೆಂದರೆ ಇಲ್ಲಿ ಒಮ್ಮೆ ಜೋರಾಗಿ ಕೂಗಿದರೆ ನಿಮ್ಮ ಸ್ವರವು ಐದು ಬಾರಿ ಪ್ರತಿಧ್ವನಿ (ಇಕೋ) ಯಾಗಿ ಕೇಳಿಸುತ್ತದೆ. ಆದ್ದರಿಂದ ಪಾಂಚ್ ಬೋಲ್ ಎಂದು ಕರೆಯಲಾಗಿದೆ. ’ಪಾಂಚ್ ಬೋಲ್’ ಎಂಬುದರ ಅರ್ಥ ಐದು ಪ್ರತಿಧ್ವನಿ (ಇಕೋ) ಎಂಬುದು.


Click it and Unblock the Notifications