Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು » ವಡಾಪಳನಿ ಮುರುಗನ್ ದೇವಾಲಯ

ವಡಾಪಳನಿ ಮುರುಗನ್ ದೇವಾಲಯ, ಚೆನ್ನೈ

1

ವಡಾಪಳನಿ ಮುರುಗನ್ ದೇವಾಲಯವು ಚೆನ್ನೈನ ಪುರಾತನ ದೇವಾಲಯಗಳಲ್ಲಿ ಒಂದಾಗಿದ್ದು ದೇಶಾದ್ಯಂತ ಹೆಸರುವಾಸಿಯಾಗಿದೆ. ಅಣ್ಣಾಸಾಮಿ ನೈಕರ್ ಎಂಬುವವರಿಂದ ಈ ದೇವಾಲಯವನ್ನು 17 ನೇಯ ಶತಮಾನದ ಕೊನೆಯಲ್ಲಿ ನಿರ್ಮಿಸಲಾಯಿತು. ಇವರು ಮುರುಗನ್ ದೇವರ ಪರಮ ಭಕ್ತರಾಗಿದ್ದರು. ಕಡು ಬಡವರಾಗಿದ್ದ ನೈಕರ್ ಅವರು ಒಂದು ಗುಡಿಸಲನ್ನು ನಿರ್ಮಿಸಿ ಅದರಲ್ಲಿ ಮುರುಗನ್ ದೇವರ ಚಿತ್ರಪಟವನ್ನಿಟ್ಟು ಪೂಜಿಸುತ್ತಿದ್ದರು.   

ದಂತಕಥೆಯೊಂದರ ಪ್ರಕಾರ, ಒಂದೊಮ್ಮೆ ನೈಕರ್ ಅವರು ಎಂದಿನಂತೆ ದೇವರನ್ನು ಕುರಿತು ಪ್ರಾರ್ಥಿಸುತ್ತಿದ್ದಾಗ ಅಕಸ್ಮಾತಾಗಿ ಅವರಿಗೆ ದೈವಿಕ ಅನುಭವವಾಯಿತು. ಆ ಸಂದರ್ಭದಲ್ಲಿ, ಅವರು ಕೆಲವು ಸಂಗತಿಗಳನ್ನು ತಿಳಿಸಿದರು ಹಾಗು ಆ ಸಂಗತಿಗಳು ಸತ್ಯವಾದವು. ಇದರಿಂದ ಅಸಮಾಧಾನಗೊಂಡ ಅವರು ತಿರುತಾನಿಗೆ ಭೇಟಿ ನೀಡಿ ಅಲ್ಲಿನ ಬಲಿಪೀಠದಲ್ಲಿ ತಮ್ಮ ನಾಲಿಗೆಯನ್ನು ಬಲಿ ಕೊಟ್ಟರು. ನಂತರ ಅಲ್ಲಿಂದ ಹಿಂತಿರುಗಿದ ಅವರು ತಮ್ಮ ಆಪ್ತ ಗೆಳೆಯನೊಬ್ಬನಲ್ಲಿ ಸಹಾಯ ಬೇಡಿದರು. ಅವರ ಈ ಒಂದು ಅದ್ಭುತ ತ್ಯಾಗಕ್ಕೆ ಮರುಳಾದ ಜನರು ಅವರ ಗುಡಿಸಲು ದೇಗುಲಕ್ಕೆ ಕಾಣಿಕೆಗಳನ್ನು ಅರ್ಪಿಸ ತೊಡಗಿದರು. ಈ ರೀತಿಯಾಗಿ ಭಕ್ತರ ಸತತ ಕಾಣಿಕೆಗಳಿಂದಾಗಿ ಚಿಕ್ಕ ಗುಡಿಸಲು ದೇಗುಲವು, ಸಣ್ಣ ದೇವಾಲಯವಾಗಿ ತದನಂತರ ದೊಡ್ಡ ದೇವಸ್ಥಾನವಗಿ ಮಾರ್ಪಟ್ಟಿತು.

ಇಂದು ಈ ದೇವಸ್ಥಾನವು ವಿಶಾಲವಾಗಿ ವಿಸ್ತರಿಸಿದೆ.  ದೇವಸ್ಥಾನದ ಆವರಣದಲ್ಲಿ ಕಲ್ಯಾಣಿಯೊಂದಿದ್ದು, ಅದರ ಪವಿತ್ರವಾದ ನೀರು ಎಲ್ಲ ರೀತಿಯ ಕಷ್ಟಕಾರ್ಪಣ್ಯಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ ಎಂದು ಜನರು ನಂಬುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat