Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು » ಮಾಂಗಾಡು ಕಾಮಾಕ್ಷಿ ಅಮ್ಮನ್ ದೇವಾಲಯ

ಮಾಂಗಾಡು ಕಾಮಾಕ್ಷಿ ಅಮ್ಮನ್ ದೇವಾಲಯ, ಚೆನ್ನೈ

1

ಚೆನ್ನೈನ ಉಪನಗರವಾದ ಮಾಂಗಾಡುವಿನಲ್ಲಿ ನೆಲೆಸಿದೆ ಕಾಮಾಕ್ಷಿ ಅಮ್ಮನ್ ದೇವಾಲಯ. ಇದು ಮಾಂಗಾಡು ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಈ ದೇವಾಲಯದಲ್ಲಿ ಶಕ್ತಿಯ ರೂಪವಾದ ಕಾಮಾಕ್ಷಿ ಅಮ್ಮನ್ ದೇವಿಯನ್ನು ಪೂಜಿಸಲಾಗುತ್ತದೆ.

ಹಿಂದು ಪೌರಾಣಿಕ ಕಥೆಯ ಪ್ರಕಾರ, ಒಂದೊಮ್ಮೆ ಶಿವ ಪಾರ್ವತಿಯರು ಮುಗ್ಧ ಮನದ ಮಕ್ಕಳಂತೆ ಆಟದಲ್ಲಿ ತಲ್ಲೀನರಾಗಿದ್ದರು. ಆಕಸ್ಮಿಕವಾಗಿ ಪಾರ್ವತಿಯು ತನ್ನ ಕೈಗಳಿಂದ ಶಿವನ ಕಣ್ಣುಗಳನ್ನು ಮುಚ್ಚಿದಳು. ಇದರಿಂದ ಸಂಪೂರ್ಣ ಜಗತ್ತು ಅಂಧಕಾರದಲ್ಲಿ ಮುಳುಗಿತು. ತಕ್ಷಣವೆ ತನ್ನ ತಪ್ಪಿನ ಅರಿವಾದ ಪಾರ್ವತಿಯು ಶಿವನಲ್ಲಿ ಕ್ಷಮೆ ಯಾಚಿಸಿದಳು. ಇದಕ್ಕೆ ಶಿವನು ಅವಳನ್ನು ಕುರಿತು ಭೂಲೋಕಕ್ಕೆ ಹೋಗಿ ತಪಸ್ಸನ್ನಾಚರಿಸುವಂತೆ ಹೇಳಿದನು. ಶಿವನ ಹೇಳಿಕೆಯಂತೆ ಭೂಲೋಕಕ್ಕೆ ಆಗಮಿಸಿದ ಪಾರ್ವತಿಯು ಮಾಂಗಾಡುವಿನ ಪಂಚಾಗ್ನಿ ಎಂಬಲ್ಲಿ ತಪಸ್ಸು ಮಾಡಲು ಪ್ರಾರಂಭಿಸಿದಳು. ಈ ತಪಸ್ಸನ್ನು ಅವಳು ವಿಶೀಷ್ಟವಾದ ಭಂಗಿಯಲ್ಲಿ ನೆರವೆರಿಸಿದಳು. ಅದೆಂದರೆ, ಕೇವಲ ಎಡಗಾಲಿನಲ್ಲಿ ನಿಂತು, ಎಡಗೈನಲ್ಲಿ ಗುಲಾಬಿ ಹೂಗಳ ಗುಚ್ಛವನ್ನು ಹಿಡಿದು ಎತ್ತಿದ್ದ ಭಂಗಿ. ಈ ಒಂದು ವಿಶೀಷ್ಟ ಭಂಗಿಯನ್ನೆ ದೇವಾಲಯದಲ್ಲಿ ರೂಪಿಸಲಾಗಿದೆ. ಇದರಿಂದ ಪ್ರಭಾವಿತನಾದ ಶಿವನು, ಕಾಂಚಿಪುರಂನಲ್ಲಿ ಪಾರ್ವತಿಯೊಂದಿಗೆ ವಿವಾಹವಾದನು.

ಈ ದೇವಾಲಯವು ಪಾಶ್ಚಾತ್ತಾಪ ಪಡುತ್ತಿರುವ ರೂಪದ ಪಾರ್ವತಿ ದೇವಿಗೆ ಮುಡಿಪಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun