ಚಂದೀಗಢ್ ನ ಹೊರವಲಯದಲ್ಲಿ ಕನ್ಸಾಲ್ ಎನ್ನುವ ಸಣ್ಣ ಹಳ್ಳಿಯಿದೆ. ಪಂಜಾಬ್ ನಿಂದ ಈ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಲೀಸ್ ಗೆ ನೀಡಿದೆ. ಈ ಹಳ್ಳಿಯಲ್ಲಿ ನಿಸರ್ಗದತ್ತ ಮೀಸಲು ಪ್ರದೇಶವಿದ್ದು, ಇದನ್ನು ಕನ್ಸಾಲ್ ಅರಣ್ಯವೆಂದು ಕರೆಯುತ್ತಾರೆ. ಕತ್ತೆಕಿರುಬ, ಹುಲ್ಲೆ, ನೀಲ ಜಿಂಕೆ ಮತ್ತು ಮೊಲ ಸಹಿತ ಹಲವಾರು ಜಾತಿಯ ಪ್ರಾಣಿಗಳಿವೆ.
ಈ ಅರಣ್ಯಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಚಂದೀಗಢ್ ನ ಅರಣ್ಯ ಉಪಸಂರಕ್ಷಣಾಧಿಕಾರಿ ಅವರಿಂದ ಅನುಮತಿಯನ್ನು ಪಡೆದುಕೊಂಡು ಪ್ರಕೃತಿ ಹಾಗೂ ವನ್ಯಪ್ರಾಣಿಗಳನ್ನು ನೋಡಬಹುದು. ಕನ್ಸಾಲ್ ಅರಣ್ಯದೊಳಗೆ ವಿಶ್ರಾಂತಿ ಮನೆಯಿದ್ದು, ಅಲ್ಲಿಂದ ಸುತ್ತಮುತ್ತಲು ಇರುವಂತಹ ಸಮೃದ್ಧ ಹಸಿರು ಹುಲ್ಲುಹಾಸುಗಳು ಮತ್ತು ವರ್ಣಮಯ ಹೂವಿನ ಹಾಸಿಗೆಗಳಿಂದ ಕಣ್ತುಂಬಿಕೊಳ್ಳಬಹುದು.